ಮಲ್ಲಿಗೆ ಇರುವಾಗ ಮುಳ್ಳಿನ ಹತ್ತಿರ ಹೋಗಬೇಡ:ವಾಲಿ

ವಿಜಯಪುರ,ಫೆ,13 :ಕಾಯಕ ಮಾಡದೆ ಹೋದರೆ ನಾವು ಸಮಾಜದಿಂದ ಏನನ್ನೂ ಪಡೆಯಲು ಯೋಗ್ಯರಲ್ಲ .ದುಡಿದು ತಿನ್ನುತ್ತಾ ಮಲ್ಲಿಗೆ ನೆಲೆಯ ಬದುಕನ್ನ ಬದುಕಬೇಕು. ಇದನ್ನು ಬಿಟ್ಟು ಅತಿ ಆಸೆಗೆ ಬಿದ್ದು ಮುಳ್ಳಿನ ಸಮೀಪಕ್ಕೆ ಹೋಗಿ ನೋವು, ಯಾತನೆ ಮಾಡಿಕೊಂಡು ಬದುಕಬಾರದು ಎಂದು ನಿವೃತ್ತ ಕನ್ನಡ ಮತ್ತ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೋಮಶೇಖರ ವಾಲಿ ಅವರು ತಿಳಿಸಿದರು.
ಐಶ್ವರ್ಯ ನಗರದಲ್ಲಿರುವ ಶ್ರೀ ವರದಾಂಜನೇಯ ಸನ್ನಿಧಿಯಲ್ಲಿ ನಡೆದ 537ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಜನಪದ ಸಾಹಿತ್ಯದಲ್ಲಿ ಬಸವಣ್ಣ, ಸಿದ್ದರಾಮ, ಹರಳಯ್ಯ, ಮಡಿವಾಳ ಮಾಚಿದೇವ, ಶಿವಶರಣೆ ಗುಡ್ಡಾಪುರದ ದಾನಮ್ಮ ಹೀಗೆ ಮುಂತಾದ ಶರಣರನ್ನು ಕುರಿತು ಜನಪದರು ಆಡಿದ, ಹಾಡಿದ ಮಾತುಗಳನ್ನು ಸಭೆಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಲಿತಾ ಹಣಕಾಸು ಸಂಸ್ಥೆಯ ಅಧ್ಯಕ್ಷ ಬಸವರಾಜ ಕಣಬೂರ ಅವರು ಮಾತನಾಡಿ, ಜನಪದ ಸಾಹಿತ್ಯವು ನಮ್ಮ ಉಸಿರಿನೊಂದಿಗೆ ಬೆರೆತಿರುವಂತದ್ದು. ಇಲ್ಲಿ ಶರಣರನ್ನು ಕುರಿತು ಹಳ್ಳಿಯ ಜನರು ಮನತುಂಬಿ ಹಾಡಿದ್ದಾರೆ. ಅವರ ಆದರ್ಶಗಳನ್ನು ಕೊಂಡಾಡಿದ್ದಾರೆ. ಅವು ಜನಾಂಗದ ಜೊತೆಗೆ ಸದಾ ಕಾಲ ಇರುತ್ತವೆ ಎಂದು ಹೇಳಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಹನುಮಂತ ಚಿಂಚಲಿ ಅವರು ಮಾತನಾಡಿ, ಭಕ್ತಿ ಬದುಕಿಗೆ ಶಕ್ತಿ ನೀಡುತ್ತದೆ. ಈ ಕಾರಣವೇ ಭಾರತವನ್ನು ಜಗತ್ತು ಗೌರವಿಸುತ್ತದೆ ಎಂದು ತಿಳಿಸಿದರು.
ವಿಶ್ರಾಂತ ಪ್ರಾಚಾರ್ಯ ಪೆÇ್ರ. ಎಂ.ಓ. ಶಿರೂರ ಸ್ವಾಗತಿಸಿದರು. ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ನಿರೂಪಿಸಿದರು.
ಅರವಿಂದ ಗೊಬ್ಬುರ, ಬಿ.ವಿ. ಪಾಟೀಲ, ಶಾಂತಗೌಡ ಪಾಟೀಲ, ರಾಜುಗೌಡ ಪಾಟೀಲ, ಎಂ.ಕೆ.ಬಿಸನಾಳ, ಎಸ್.ಕೆ. ಬಿರಾದಾರ, ಮಲ್ಲಯ್ಯ ಹಿರೇಮಠ. ಗುರುರಾಜ್ ಹಿರೇಮಠ, ರಾಜಣ್ಣ ಜಕ್ಕುಂಡಿ,
ಜಿ.ಕೆ. ಬಾಗೇವಾಡಿ, ರಾಮಗೊಂಡಪ್ಪ ಗುದ್ದಿ, ಶ್ರೀಶೈಲ ಬೆಲ್ಲದ, ರಮೇಶ ಮರನೂರ, ಪೆÇ್ರ, ಉಣಕಿ, ಅಶೋಕ ಬನಹಟ್ಟಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.