ಮಲ್ಲಿಗವಾಡ ಸಹಕಾರ ಸಂಘಕ್ಕೆ ಆಯ್ಕೆ

ಹುಬ್ಬಳ್ಳಿ,ಮಾ17: ತಾಲೂಕಿನ ಮಲ್ಲಿಗವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಲ್ಲರಡ್ಡಿ ಇನಾಮತಿ ಉಪಾಧ್ಯಕ್ಷರಾಗಿ ಶರಣಪ್ಪ ಬಸಪ್ಪ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಶಿವಯ್ಯ ಭಾಗವಾಡಮಠ, ಚಂದ್ರಶೇಖರಪ್ಪ ಸುಗ್ನಳ್ಳಿ, ಗಂಗಪ್ಪ ಸೊರಟೂರ, ನಂದೀಶ ಬಡಪಕ್ಕಿರಪ್ಪನವರ, ಚಂದ್ರನಾಥ್ ಅಪ್ಪಣ್ಣವರ, ಇಂದಿರಾಬಾಯಿ ಇನಾಮತಿ, ಮಲ್ಲವ್ವ ಮುಸಂಡಿ, ಮಹಾಂತೇಶ ಭಾವಿಕಟ್ಟಿ, ಮಂಜುನಾಥ ನಾಗರಳ್ಳಿ, ಪಂಚಾಕ್ಷರಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ.
ಮಲ್ಲಿಗವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಅವಿರೋಧ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಗೋವಿಂದರಡ್ಡಿ ಇನಾಮತಿ, ಚುನಾವಣೆ ಅಧಿಕಾರಿ ಪಿ. ಮಧುಸೂದನ, ವಿ.ಡಿ ಬಾವಿಕಟ್ಟಿ, ಕೇಶವರಡ್ಡಿ ಇನಾಮತಿ, ಮ್ಯಾನೇಜರ್ ಮಂಜುನಾಥ ಖನ್ನೂರ, ಕಾರ್ಯದರ್ಶಿ ಮಂಜುನಾಥ ಮಡಿವಾಳರ, ಹನುಮಂತಪ್ಪ ಬೆಳಗಿ ಇನ್ನಿತರರಿದ್ದರು.