ಮಲ್ಲಾಪುರ ಶಾಲೆ ಯಲ್ಲಿ ಬಾಲಕಾರ್ಮಿಕ ನಿರ್ಮೂಲನ ಅಭಿಯಾನ

(ಸಂಜೆವಾಣಿ ವಾರ್ತೆ)
ಗುರುಮಠಕಲ್:ಜು.1: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾಪುರ ತಾಂಡಾ ತಾಲೂಕ ಗುರುಮಠಕಲ ಶಾಲೆಯಲ್ಲಿ ದಿನಾಂಕ 30 -6 -20 23.ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ ಪೆÇಲೀಸ್ ಇಲಾಖೆ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ಬಾಲಕಾರ್ಮಿಕ ನಿರ್ಮೂಲನ ಅಭಿಯಾನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಸದರಿ ಕಾರ್ಯಕ್ರಮದಲ್ಲಿ ಗೌರವಾನ್ವಿತರಾದ ಮಾನ್ಯ ಶ್ರೀ ರವೀಂದ್ರ ಎಲ್ ಹೊನ್ನೋಲೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಯಾದಗಿರಿ ರವರು ಉದ್ಘಾಟಕರಾಗಿ ಆಸೀನರಾಗಿದ್ದರು. ಮಾನ್ಯ ಶ್ರೀ ರಾಘವೇಂದ್ರ ಸಿಪಿಐ ಮಹಿಳಾ ಪೆÇಲೀಸ್ ಠಾಣೆ ಯಾದಗಿರಿ ಹಾಗೂ ಶ್ರೀ ಅನಂತ್ ರೆಡ್ಡಿ ಪ್ರಧಾನ ಕಾನೂನು ನೆರವು ಅಭಿರಕ್ಷಕರು ಯಾದಗಿರಿ ಹಾಗೂ ಶ್ರೀ ಕೃಷ್ಣ ವಕೀಲರು ಯಾದಗಿರಿ. ಶ್ರೀಮತಿ ಕೃಷ್ಣವೇಣಿ ವಕೀಲರು ಯಾದಗಿರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಮತ್ತು ಶ್ರೀ ಸೈಯದ್ ಬಾಬಾ ಸಿ ಆರ್ ಪಿ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಮುಖ್ಯ ಗುರುಗಳು ಶ್ರೀ ನರಸಪ್ಪ ವಹಿಸಿಕೊಂಡಿದ್ದರು ಕಾರ್ಯಕ್ರಮ ದಲ್ಲಿ ಸಹ ಶಿಕ್ಷಕರು ಹಾಗೂ ಗಣ್ಯ ವ್ಯಕ್ತಿಗಳು ಪಾಲಕ ಪೆÇೀಷಕರು ಶಾಲಾ ಸುಧಾರಣಾ ಅಧ್ಯಕ್ಷರು ಸದಸ್ಯರು ಹಳೆ ವಿದ್ಯಾರ್ಥಿಗಳ ಯುವಕ ಸಂಘದ ಪದಾಧಿಕಾರಿ ಗಳು ಶಾಲಾ ಮಕ್ಕಳು ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.