ಮಲ್ಲಾಪುರದಲ್ಲಿ ಮಾಸ್ಕ್, ಸ್ಯಾನಿಟೈಜರ್ ವಿತರಣೆ

ರಾಯಚೂರು, ಮೇ.೧- ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಎಚ್‌ಆರ್ ಎಸಿಎಫ್ ವತಿಯಿಂದ ಜನರಿಗೆ ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೈಯದ್ ಸಾದಿಕ್ ಮಾತನಾಡಿ, ಕೊರೊನಾ ೨ ನೇ ಅಲೆ ವೇಗವಾಗಿ ಹರಡುತ್ತಿದ್ದು, ಜನತೆ ಗುಂಪಾಗಿ ಸೇರಬಾರದು. ಅನಗತ್ಯವಾಗಿ ಹೊರಗಡೆ ಓಡಾಡಬಾರದು, ಮಾಸ್ಕ್ ತಪ್ಪದೇ ಧರಿಸಬೇಕು. ಅಗತ್ಯ ವಸ್ತುಗಳ ಖರೀದಿ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಎಂ.ಜಿ.ಶಾಹೀದ್, ಎಂ.ಡಿ. ಅಜಾಜ್, ಕೃಷ್ಣಾ ಘಂಟಿ, ಶಂಕರ್ ಗೌಡ, ಗೋವಿಂದ್, ಶುಶಾಂತ್ ಮತ್ತು ಇತರರು ಉಸ್ಥಿತರಿದ್ದರು.