ಮಲ್ಲವ್ವ ತಳವಾರ ಅವರಿಗೆ ಪಿಹೆಚ್‍ಡಿ ಪದವಿ ಪ್ರದಾನ


ಬಳ್ಳಾರಿ,ಜೂ.04: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಮಲ್ಲವ್ವ ತಳವಾರ ಅವರಿಗೆ ಪಿ.ಹೆಚ್.ಡಿ. ಪದವಿ ಘೋಷಿಸಿದೆ.
ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಗೌರಿ ಮಾಣಿಕ ಮಾನಸ ಅವರ ಮಾರ್ಗದರ್ಶನದಲ್ಲಿ ಸಮಾಜ ವಿಜ್ಞಾನ ನಿಕಾಯದ ಸಮಾಜ ಕಾರ್ಯ ವಿಭಾಗದಲ್ಲಿ “ಎ ಸ್ಟಡಿ ಆನ್ ದಿ ಸೊಸಿಯೊ ಎಕಾನಾಮಿಕ್ ಕಂಡೀಷನ್ಸ್ ಆಫ್ ಹಕ್ಕಿ-ಪಿಕ್ಕಿ ಕಮ್ಯುನಿಟಿ ವಿಥ್ ಸ್ಪೆಷಲ್ ರೆಫರೆನ್ಸ್ ಟು ದಿ ಗದಗ ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧ ಮಂಡನೆಗೆ ಡಾಕ್ಟರ್ ಅಫ್ ಫಿಲಾಸಫಿ ಪದವಿಯನ್ನು ಘೋಷಣೆ ಮಾಡಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ.ಯು ಪ್ರಕಟಣೆಯಲ್ಲಿ ತಿಳಿಸಿದೆ.