ಮಲ್ಲಟ ಶಾಲೆಗಳಿಗೆ ಶಾಸಕರ ಭೇಟಿಸ್ವಚ್ಚತೆಗೆ ಆದ್ಯತೆ ನೀಡಲು ಸೂಚನೆ

ಸಿರವಾರ ನ೨೫: ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ, ಸರ್ಕಾರಿ ಶಾಲೆಯಲ್ಲಿ ಎಲ್ಲಾ ತರಹದ ಸೌಲಭ್ಯ ಕಲ್ಪಿಸಲಾಗಿದೆ, ಉತ್ತಮ ಶಿಕ್ಷಣ ದೊರೆಯುತ್ತದೆ ಹೀಗಾಗಿ ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ತಾಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಸಮಸ್ಯೆ ಕುರಿತು ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಶಾಲೆಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು.
ನಂತರ ಮಾತನಾಡಿ ಶಾಲೆಯ ತರಗತಿ ಕೋಣೆಗಳಲ್ಲಿ ಸುತ್ತಾಡಿ ಕಟ್ಟಡದ ಸ್ಥಿತಿಗತಿಯನ್ನು ವೀಕ್ಷಿಸಿದರು. ಕೆಲವು ಕೋಣೆಗಳು ಶಿಥಿಲಾವಸ್ಥೆಗೆ ಬಂದಿರುವುದನ್ನು ಕಂಡು, ಹೊಸ ತರಗತಿ ಕೋಣೆಗಳನ್ನು ನಿರ್ಮಿಸಿಕೊಡಲಾಗುವುದೆಂದರು. ನಂತರ ಮಕ್ಕಳೊಂದಿಗೆ ಪಠ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಯೊಬ್ಬರಿಗೆ ಕನ್ನಡ ಪುಸ್ತಕ ಓದಿಸುವುದರೊಂದಿಗೆ ಶಾಲೆಯಲ್ಲಿ ನಡೆಯುವ ಪಠ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು.
ಶಾಲೆಯ ಆವರಣ ಹಾಗೂ ತರಗತಿ ಕೋಣೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಶಿಕ್ಷಕರು ಅನಗತ್ಯ ಗೈರು ಹಾಜರಾಗುವುದು ನಿಲ್ಲಿಸಬೇಕು. ಕಡ್ಡಾಯವಾಗಿ ಸಮಯ ಪಾಲನೆ ಮಾಡಬೇಕು. ಪಠ್ಯ ಚಟುವಟಿಕೆಗಳು ಅಚ್ಚುಕಟ್ಟಾಗಿ ನಡೆಸಬೇಕೆಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಎಇಇ ವಿಜಯ ಸಿಂಗ್ ಚೌಹಾಣ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನೆ, ತಾ.ಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ,ಮಲ್ಲಟ ಗ್ರಾ.ಪಂ ಅಧ್ಯಕ್ಷ ಹನುಮಂತ ನಾಯಕ, ಬಿ.ಆರ್.ಸಿ ದಿವಾಕರ್, ಗ್ರಾ.ಪಂ ಸದಸ್ಯರಾದ ರವಿಕುಮಾರ ಛಲವಾದಿ, ಬಸವರಾಜ ನಾಯಕ ಸೇರಿದಂತೆ ಗ್ರಾಮಸ್ಥರಿದ್ದರು.