ಮಲ್ಕಾಪುರ ಬಸವಾರ್ಯ ಗವಾಯಿಗಳ ಪುಣ್ಯಸ್ಮರಣೆ

ಸಂಜೆವಾಣಿ ವಾರ್ಥೆ
ಸಿರುಗುಪ್ಪ ಜ 14 : ನಗರದ ಹಳೇ ಕೆಂಚನಗುಡ್ಡ ರಸ್ತೆಯ ಪಾರ್ವತಿ ನಗರದ ಶ್ರೀಗುರು ಸಂಗೀತ ಪಾಠ ಶಾಲೆಯಲ್ಲಿ ಸಂಕ್ರಮಣ ಕಾಲದ ಪುಣ್ಯಪುರುಷ ಶ್ರೀಮಲ್ಕಾಪುರ ಬಸವಾರ್ಯ ಗವಾಯಿಗಳ ಪ್ರಥಮ ಪುಣ್ಯಸ್ಮರಣೆ ಹಾಗೂ ನುಡಿ ನಮನ ಶುಕ್ರವಾರ ನಡೆಯಿತು.
ಗವಾಯಿ ಶಾಂತಮೂರ್ತಿ ಸ್ವಾಮಿ ಮಾತನಾಡಿ ಶ್ರೀಮಲ್ಕಾಪುರ ಬಸವಾರ್ಯ ಗವಾಯಿಗಳು ತಮ್ಮ ಮಧುರ ಕಂಟದಿಂದ ಹಿಂದುಸ್ತಾನಿ ಸಂಗೀತವನ್ನು ನಾಡಿನಾದ್ಯಾಂತ ಗಾಯನದ ಪರಿವಳವನ್ನು ಪಸರಿಸಿ ಪ್ರಖ್ಯಾತಿ ಹೊಂದಿದ್ದರು, ಅವರು ನೂರಾರು ಶಿಷ್ಯ ವೃಂಧವರಿಗೆ ಸಂಗೀತಾ ಉಣ್ಣಬಡಿಸಿದ್ದಾರೆಂದು ಸ್ಮರಿಸಿದರು.
ನಾ.ಮ.ಜಗಧೀಶ ಗವಾಯಿ, ಮಲ್ಕಾಪುರ ಮಹಾದೇವಯ್ಯ ಗವಾಯಿಗಳು ಸಂಗೀತಾದ ಮೂಲಕ ನುಡಿ ನಮನಸಲ್ಲಿಸಿದರು.

Attachments area