ಮಲೈಕಾ-ಅರ್ಜುನ್ ಸ್ಟೈಲಿಶ್ ಕಪಲ್

ಮುಂಬೈ, ಜು. ೧೬- ನಿನ್ನೆ ನಡೆದ ಸ್ಟಾರ್-ಸ್ಟಡ್ ಈವೆಂಟ್‌ನಲ್ಲಿ ಬಾಲಿವುಡ್‌ನ ಸ್ಟಾರ್ ಕಪಲ್ ಎನಿಸಿಕೊಂಡ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಹಿಂದೂಸ್ತಾನ್ ಟೈಮ್ಸ್ ಇಂಡಿಯಾದ ಮೋಸ್ಟ್ ಸ್ಟೈಲಿಶ್ ಕಪಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಸಮಾರಂಭದಲ್ಲಿವ ಇಬ್ಬರನ್ನು ಅತ್ಯಂತ ಸ್ಟೈಲಿಶ್ ಜೋಡಿ ಎಂದು ಘೋಷಿಸಲಾಯಿತು. ಇಬ್ಬರೂ ಸಮಾರಂಭಕ್ಕೆ ಒಟ್ಟಿಗೆ ಆಗಮಿಸಿದ್ದರು ಮತ್ತು ಪ್ರಶಸ್ತಿ ಗೆದ್ದ ನಂತರ ತಮ್ಮ ಭಾಷಣದಲ್ಲಿ ಪರಸ್ಪರ ಹೊಗಳಿ ಪ್ರತಿಕ್ರಿಯಿಸಿದರು.
ಸ್ಟೈಲಿಶ್ ಪ್ರಶಸ್ತಿಗಳಿಗೆ ಆಗಮಿಸಿದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೈ ಕೈ ಹಿಡಿದು ರೆಡ್ ಕಾರ್ಪೆಟ್ ಮೇಲೆ ನಡೆದರು. ಇಬ್ಬರೂ ನೀಲಿ ಔಟ್ ಪಿಟ್ ಧರಿಸಿದ್ದರು ಮತ್ತು ಮುಂಬೈನಲ್ಲಿ ನಡೆದ ಸ್ಟಾರ್-ಸ್ಟಡ್ಡ್ ಈವೆಂಟ್‌ನಲ್ಲಿ ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್, ಶೆಹನಾಜ್ ಗಿಲ್, ಶಿಲ್ಪಾ ಶೆಟ್ಟಿ, ಅನಿಲ್ ಕಪೂರ್ ಮುಂತಾದವರನ್ನು ಹಾಜರಿದ್ದರು.
ಅರ್ಜುನ್ ಮತ್ತು ಮಲೈಕಾ ಅರೋರಾ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ಅರ್ಜುನ್ ಹುಟ್ಟುಹಬ್ಬವನ್ನು ರೋಮ್ಯಾಂಟಿಕ್ ಆಗಿ ಪ್ಯಾರಿಸ್ ನಲ್ಲಿ ಆಚರಿಸಿದ್ದರು.
ಇಬ್ಬರೂ ತಮ್ಮ ಗೆಲುವಿನ ನಂತರ ವೇದಿಕೆಯಲ್ಲಿ ಒಬ್ಬರನ್ನೊಬ್ಬರು ಹೊಗಳಿಕೊಂಡರು. ಅರ್ಜುನ್ ಕೂಡ ಮಲೈಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, “ನನ್ನನ್ನು ಸ್ಟೈಲಿಶ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾನು ಇಲ್ಲಿ ನಿಂತಿದ್ದೇನೆ, ಆಕಯೊಂದಿದಿಗೆ ಪ್ರಶಸ್ತಿ ಗೆದ್ದಿದ್ದೇನೆ. ಆದರೆ ಹೆಚ್ಚು ಮುಖ್ಯವಾಗಿ ನಾನು ಇಲ್ಲಿರುವುದು ಸಂತೋಷವಾಗಿದೆ ಏಕೆಂದರೆ ಅವರು ನನ್ನನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತಾರೆ ಎಂದು ಹೇಳಿದರು.