ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್

ಮುಂಬೈ, ಡಿ. ೭- ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮಾಲ್ಡೀವ್ಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಅರ್ಜುನ್ ತಮ್ಮ ಗೆಳತಿಗೆ ಡೇಟ್ ನೈಟ್‌ನೊಂದಿಗೆ ಸರ್ಪ್ರೈಸ್ ನೀಡಿದ್ದಾರೆ. ಅವರು ತಮ್ಮ ರೊಮ್ಯಾಂಟಿಕ್ ಡಿನ್ನರ್‌ನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಗೆಳತಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಮಾಲ್ಡೀವ್ಸ್ ರಜೆ ದಿನಗಳನ್ನು ಸಂಭ್ರಮದಿಂದ ಕಳೆಯುತ್ತಿದ್ದಾರೆ. ಸೋಮವಾರ ಬೀಚ್‌ನಲ್ಲಿ ಅವರ ಡೇಟ್ ನೈಟ್‌ನ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹಸಿರು ನಿಲುವಂಗಿಯನ್ನು ಧರಿಸಿರುವ ಮಲೈಕಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಅರ್ಜುನ್ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಇದಕ್ಕೆ ಹಲವು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಂದಿಷ್ಟು ಜನ ಮದುವೆಯ ಬಗ್ಗೆ ಪ್ರಶ್ನಿಸಿದ್ದಾರೆ.