ಮಲೇರಿಯಾ ಸಾಂಕ್ರಾಮಿಕ ರೋಗ ಎಚ್ಚರ

ಸಿಂಧನೂರು,ಜೂ.೨೩-
ಮಲೇರಿಯಾ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ನಮ್ಮ ಮನೆ ಹಾಗೂ ನೇರೆ ಹೊರೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳವ ಮೂಲಕ ಮಲೇರಿಯಾ ಜ್ವರ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಾಲುಕಾ ಮಲೇರಿಯಾ ಅಧಿಕಾರಿ ಎಫ್. ಎ.ಹಣಗಿ ಹೇಳಿದರು.
ತಾಲ್ಲೂಕಿನ ಗುಂಡಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದ ಅವರು ಮಲೇರಿಯಾ ಪ್ಲಾಸ್ಮೋಡಿಯಂ ಪರಾವಲಂಭಿ ಸೂಕ್ಷ್ಮಾಣುಜೀವಿ ಮನುಷ್ಯನ ಯುಕ್ರುತನಲ್ಲಿ ಶೇಖರಣೆಯಾಗಿ ಬೆಳೆದು ನೋವು ಕಾಣುತ್ತದೆ ಎಂದರು.
ಮಲೇರಿಯಾ ಮಾರಣಾಂತಿಕವಲ್ಲದಿದ್ದರೂ ವ್ಯಕ್ತಿಯ ಆರೋಗ್ಯದಲ್ಲಿ ವಿಪರೀತ ದುಷ್ಪರಿಣಾಮ ಬೀರುತ್ತಿದೆ ಮಲೇರಿಯಾ ರೋಗವು ರಕ್ತದ ಪ್ಲಾಸ್ಮಾ ತಿಂದು ಬದುಕುವದರಿಂದ ಮನುಷ್ಯನ ದೇಹದಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತವೆ.
ಗರ್ಭಿಣಿ ಸ್ತ್ರೀ ಗೆ ಮಲೇರಿಯಾ ಕಂಡು ಬಂದರೆ ರಕ್ತ ರಕ್ತಹೀನತೆ ಜೊತೆಗೆ ರೋಗದ ಉಲ್ಬಣ ಹೆಚ್ಚಾಗಿ ಹೊಟ್ಟೆಯಲ್ಲಿನ ತಾಯಿ, ಮಗುವಿನ ಜೀವಕ್ಕೆ ಅಪಾಯವಾಗುವ ಸಂಭವ ಇರುತ್ತದೆ.
ಮಲೇರಿಯಾ ರೋಗಾಣುವನ್ನು ೧೮೮೦ ರ ನವೆಂಬರ್ ೬ ರಂದು ಕಂಡು ಹಿಡಿಯಲಾಗಿದ್ದು ದೇಶದಲ್ಲಿ ೧೦ ವರ್ಷದ ಹಿಂದೆ ೧೫ ಲಕ್ಷ ಪ್ರಕರಣಗಳು ಕಂಡುಬರುತ್ತಿದ್ದವು ಕ್ರಮೇಣ ಆರೋಗ್ಯ ಇಲಾಖೆಯ ಸತತ ಪ್ರಯತ್ನ ಮತ್ತು ಲಾರ್ವಾ ಸಮೀಕ್ಷಾ ಕಾರ್ಯ ಹಾಗೂ ಜ್ವರ ಸಮೀಕ್ಷೆಯ ಜೊತೆಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳಿಂದ ನಿಯಂತ್ರಣಕ್ಕೆ ಬಂದಿದೆ ಎಂದರು.
ಗುಂಡ ಉಪಕೇಂದ್ರದ ಆರೋಗ್ಯ ಅಧಿಕಾರಿಯಾದ ಅನ್ನಪೂರ್ಣ, ಕಿರಿಯ ಆರೋಗ್ಯ ಸಹಾಯಕಿ ನಳನಿ ಪ್ರೌಢ ಶಾಲೆಯ ಪ್ರಾಚಾರ್ಯರು ಹಾಗೂ ವಿಜ್ಞಾನ ಶಿಕ್ಷಕರು ಸಿಬ್ಬಂದಿಗಳು ಮಕ್ಕಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.