ಮಲೇರಿಯಾ ರೋಗದಿಂದ ರಕ್ಷಿಸಿಕೊಳ್ಳಿ -ನಂದ ಕುಮಾರ

ಸಿಂಧನೂರು.ಏ.೨೭-ವಿಶ್ವ ಮಲೇರಿಯಾ ದಿನಾಚರಣೆ ಯನ್ನು ತಾಲುಕ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿಗಳು ಆಚರಿಸಿ ಜನರಲ್ಲಿ ಜನರಲ್ಲಿ ಮಲೇರಿಯಾ ಬಗ್ಗೆ ಜಾಗೃತಿ ಅಧ್ಯಾಯನ ನಡೆಸಿದರು.
ಪ್ರತಿ ವರ್ಷ ಏಪ್ರಿಲ್ ೨೫ ರಂದು ವಿಶ್ವದಾದ್ಯಂತ ವಿಶ್ವ ಮಲೇರಿಯಾ ದಿನಾಚರಣೆ ಯನ್ನು ಆಚರಿಸಲಾಗುತ್ತದೆ.ಮಲೇರಿಯಾ ರೋಗದಿಂದ ಆಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಲೇರಿಯಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಟಿ.ಎಚ್.ಒ ನಂದ ಕುಮಾರ ಮಾತಾನಾಡಿದರು.
ವಿಶ್ವ ಸಂಸ್ಥೆಯ ೬೦ ನೇಯ ವಾರ್ಷಿಕ ಸಮ್ಮೇಳನ ೨೦೦೭ ರಲ್ಲಿ ಜರುಗಿದಾಗ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತೆಂದು ಡಾಜೀವನೇಶ್ವರಯ್ಯ ಹೇಳಿದರು.
ಈ ರೋಗವನ್ನು ದೇಶದಿಂದ ಹೊಡೆದೊಡಿಸಿ ೨೦೨೨ ರ ಹೊತ್ತಿಗೆ ಮಲೇರಿಯಾ ಮುಕ್ತ ದೇಶ ಮಾಡಲು ಪಣತೊಡಲಾಗಿದೆ ಕಾರಣ ಮುಖ್ಯ ನಾಲ್ಕು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಮಲೇರಿಯಾ ರೋಗದಿಂದ ಬಚಾವ್ ಆಗಬೇಕೆಂದು ಎಫ್.ಎ ಹಣಗಿ ಹೇಳಿದರು.
ಡಾ.ಅಯ್ಯನಗೌಡ, ಡಾ.ಮಂಜುಳಾ, ಡಾ.ಗುರುಬಸವ, ಹಿರಿಯ ಆರೋಗ್ಯ ಸಹಾಯಕ ಸಂಗನಗೌಡ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.