ಮಲೇರಿಯಾ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ .


ಸಂಜೆವಾಣಿ ವಾರ್ತೆ
ಸಂಡೂರು:ಜು:21: ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮಲೇರಿಯಾ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,  
ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 2025 ರೊಳಗೆ ಮಲೇರಿಯಾ ಮುಕ್ತ ರಾಜ್ಯ ನಿರ್ಮಾಕ್ಕೆ ಇಲಾಖೆ ಪಣತೊಟ್ಟಿದ್ದು, ಸರ್ಕಾರದ ಆದೇಶದಂತೆ ಮಲೇರಿಯಾ ಕುರಿತು ಹೆಚ್ಚು ಹೆಚ್ಚು ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ, ಅನಾಫೆಲಿಸ್ ಸೊಳ್ಳೆಯಿಂದ ಹರಡುವ ಮಲೇರಿಯಾ ಜ್ವರ ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣವು ಅತೀ ಮುಖ್ಯವಾಗಿದೆ, ಗ್ರಾಮದ ಸುತ್ತಲೂ ನೀರನ ಮೂಲಗಳಿದ್ದು ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಿರುತ್ತದೆ, ನೀರು ಶೇಕರಣೆ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು, ಮಲಗುವಾಗ ಸೊಳ್ಳೆ ಪರದೆಗಳನ್ನು ಕಟ್ಟಿ ಕೊಳ್ಳಬೇಕು, ಮಲೇರಿಯಾ ಲಕ್ಷಣಗಳಾದ ಚಳಿ ಜ್ವರ, ಬಿಟ್ಟು ಬಿಟ್ಟು ಜ್ವರ ಬರುವುದು, ಬೆವರು ಬಂದು ಮೈ ತಣ್ಣಗಾಗುವುದು,ತಲೆ ನೋವಿನಂತ ಲಕ್ಷಣಗಳು ಕಂಡು ಬಂದರೆ ಕಡ್ಡಯವಾಗಿ ರಕ್ತ ಪರೀಕ್ಷೆ ಮಾಡಿಸಿ ಕೊಳ್ಳಬೇಕು, ಧೃಡ ಪಟ್ಟರೆ 4 ರಿಂದ 14 ದಿನಗಳ ವರೆಗೆ ಚಿಕಿತ್ಸೆ ಪಡೆಯಬೇಕು, ಮತ್ತು ಅನುಪಾಲನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಆಶಾ ಕಾರ್ಯಕರ್ತೆ ಅಂಜಿನಮ್ಮ, ಅಂಗನವಾಡಿ ಕಾರ್ಯಕರ್ತೆ ರೇಷ್ಮ ಮತ್ತು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

Attachments area