ಮಲೇರಿಯಾದ ಬಗ್ಗೆ ನಿರ್ಲಕ್ಷ ವಹಿಸದೆ ಚಿಕಿತ್ಸೆ ಪಡೆಯಿರಿ

ಕಲಬುರಗಿ :ಎ.25: ಸಾಮಾನ್ಯವಾಗಿ ಬರುವ ಮಲೇರಿಯಾ ಕಾಯಿಲೆ, ಚಳಿ, ನಡುಕ, ಜ್ವರದಂತಹÀ ಲಕ್ಷಣಗಳನ್ನು ಹೊಂದಿದ್ದು ಕಂಡುಬಂದರೆ, ತಕ್ಷಣ ರಕ್ಷ ಪರೀಕ್ಷೆ ಮಾಡಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಬೇಕು. ಅದರ ಬಗ್ಗೆ ನಿರ್ಲಕ್ಷ ಮಾಡಬಾರದೆಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಸಲಹೆ ನೀಡಿದರು.

      ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ಸರಳವಾಗಿ ಜರುಗಿದ 'ವಿಶ್ವ ಮಲೇರಿಯಾ ದಿನಾಚರಣೆ'ಯಲ್ಲಿ ಅವರು ಮಾತನಾಡುತ್ತಿದ್ದರು.

    ಸೋಂಕಿತ ಅನಾಫಿಲೀಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಬರುತ್ತದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡುವುದು, ನೀರಿನ ಸಂಗ್ರಹಳನ್ನು ಭದ್ರವಾಗಿ ಮುಚ್ಚಿಡುವುದು, ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು. ಶುದ್ಧವಾದ ನೀರಿನ ಸೇವನೆ, ಸಮತೋಲಿತ ಆಹಾರವನ್ನು ಸೇವಿಸುವುದು, ಮಳೆಯಲ್ಲಿ ನೆನೆಯದಂತೆ ಲಕ್ಷ್ಯವಹಿಸುವುದು ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರತಿಯೊಬ್ಬರು ತಮ್ಮ ಮಲೇರಿಯಾದಿಂದ ಪಾರಾಗುವದರ ಜೊತೆಗೆ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆಯೆಂದು ಸಲಹೆಗಳನ್ನು ನೀಡಿದರು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಸಾಗರ ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ಅಣ್ಣಾರಾಯ ಎಚ್.ಮಂಗಾಣೆ, ದೇವೇಂದ್ರಪ್ಪ ಗಣಮುಖಿ, ದಾನಯ್ಯಸ್ವಾಮಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮಂಗಳಾ, ಚಂದಮ್ಮಾ, ನಾಗಮ್ಮ, ಜಗನಾಥ ಗುತ್ತೇದಾರ, ವಿಜುಬಾಯಿ, ಸಂಗೀತಾ, ಅರ್ಚನಾ ಸಿಂಗೆ, ಗಂಗಾಜ್ಯೋತಿ ಗಂಜಿ ಸೇರಿದಂತೆ ಮತ್ತಿರರಿದ್ದರು.