ಮಲೇಬೆನ್ನೂರು ಜುಮ್ಮಾ ಮಸೀದಿ ಆಡಳಿತಾಧಿಕಾರಿ ನೇಮಕ

ಸಂಜೆವಾಣಿ ವಾರ್ತೆ

ಮಲೇಬೆನ್ನುರು.ಮಾ.೨; ಇಲ್ಲಿನ  ಜುಮ್ಮಾ ಮಸೀದಿ (ಸುನ್ನಿ) ಆಡಳಿತ ಮತ್ತು ದಾಖಲಾತಿ ಅಧಿಕಾರಿಯನ್ನಾಗಿ ಜಿಲ್ಲಾ ವಕ್ಫ್ ಅಧಿಕಾರಿ ಮೌಜಂ ಪಾಷಾ ಇವರನ್ನು ರಾಜ್ಯ ವಕ್ಪ್ ಮಂಡಳಿ ನೇಮಕ ಮಾಡಿ ಅದೇಶಿಸಿದೆ ಇದುವರೆಗೆ ಇಲ್ಲಿ ಅಡಳಿತ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸೈಯದ್ ನಿಸಾರ್ ಅಹ್ಮದ್ ಇವರಿಂದ ಅಧಿಕಾರ ವಹಿಸಿಕೊಂಡಿರುವ ಮೌಜಂ  ಜುಮ್ಮಾ ಮಸೀದಿಯ ವಕ್ಫ್ ಸಂಸ್ಥೆಯ ಜನರಲ್ ಬಾಡಿ ಸದಸ್ಯರನ್ನು ನೋಂದಾಯಿಸಲು ನೊಂದಣಿ. ಹಾಗೂ ಪಾಲಕರಾಗಿ ವಕ್ಪ್ ನಿಯಮಗಳು 2017 ರ ನಿಯಮ 54 (5) ರ ಅಡಿಯಲ್ಲಿ  ನೇಮಕಗೊಂಡಿದ್ದಾರೆ ಮತ್ತು ಜುಮ್ಮಾ ಮಸೀದಿ (ಸುನ್ನಿ)  ಅದರ ಸಂಬಂಧಿತ ಆಸ್ತಿಗಳಿಗೆ ದಾಖಲಾತಿ ಅಧಿಕಾರಿ,ಯಾಗಿ ಕಾರ್ಯನಿರ್ವಾಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.