ಮಲೆ ಮಾದಪ್ಪನ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಕೊಂಡೋತ್ಸವ

ಸಂಜೆವಾಣಿ ವಾರ್ತೆ
ಹನೂರು ಮಾ 14 :- ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಜಾತ್ರೆಯ ವಿಶೇಷವಾಗಿ ಬೇಡಗಂಪಣ ಸಂಪ್ರದಾಯಿಕವಾಗಿ ಸೋಮವಾರ ರಾತ್ರಿ ಕೊಂಡೋತ್ಸವ ಸೇವೆಯು ಕಟ್ಟುನಿಟ್ಟಿನ ಬೇಡಗಂಪಣ ಧಾರ್ಮಿಕ ಪದ್ದತಿಯಂತೆ ಶ್ರದ್ಧಾ ಭಕ್ತಿಯಿಂದ ನೆರವೇರಿಸುವ ಮೂಲಕ ಐದು ದಿನಗಳ ಶಿವರಾತ್ರಿ ಜಾತ್ರಾ ಮಹೋತ್ಸವ ಆಚರಣೆ ಕಾರ್ಯಕ್ರಮಗಳಿಗೆ ತೆರೆಯಲಾಯಿತು.
ಮಲೆ ಮಹದೇಶ್ವರ ಸ್ವಾಮಿಯ ದೇವಸ್ಥಾನದ
ರಾಜಗೋಪುರದ ಮುಂಭಾಗದಲ್ಲಿ ಸಂಪ್ರದಾಯಿಕ 12 ಮೊಳ ಉದ್ದ ಹಾಗೂ ಎರಡುವರೆ ಮೊಳ ಹಗಲವಾದ ಕೊಂಡೋತ್ಸವಕ್ಕೆ ಬೆಜ್ಜಲ ಕಟ್ಟಿಗೆಯನ್ನು ಮಾತ್ರ ಹಾಕಿ ಬೆಂಕಿಯ ಕೆಂಡವು ರಕ್ತಕೆಂಪು ಹರಳಿನ ರೀತಿ ದಗದಗಿಸಿ ಉರಿದಿರುವಂತೆ ತಯಾರು ಮಾಡಲಾಗಿತ್ತು.
ಸಕಲ ಛತ್ರಿ ಚಾಮರಗಳ ಸಮೇತವಾಗಿ ಜಾಗಟೆ, ನಗಾರಿ , ಡಮರು ವಾದ್ಯಗಳೂಂದಿಗೆ ಮೂರು ಸುತ್ತು ಅಗ್ನಿಯ ಕುಂಡವನ್ನು ಪ್ರದಕ್ಷಿಣೆ ಮಾಡಿ ಬೇಡಗಂಪಣ ಸಂಪ್ರದಾಯಿಕ ದಿಕ್ಕು ದಿಕ್ಕಿಗೆ ಬಲಿ ಅನ್ನವನ್ನು ಸಮರ್ಪಣೆಮಾಡಿ. ದೂಪದ ಸೇವೆ, ಮಂಗಳಾರತಿ ಹಾಗೂ ಬೂದುಕುಂಬಳ ಕಾಯಿಯನ್ನು ಒಡೆದು ಪೂಜೆ ಸಲ್ಲಿಸಿದರು.
ನಂತರ ಬೇಡಗಂಪಣ ಸರದಿಯ ಮೊದಲ ತಮ್ಮಡಿಯು ಕರಯದ ಕಿಂಡಿಯಿಂದ ಮೂರು ಭಾರಿ ತೀರ್ಥವನ್ನು ಅಗ್ನಿ ಕುಂಡಕ್ಕೆ ಪೆÇ್ರಕ್ಸಣೆಯನ್ನು ಮಾಡಿ ಕ್ರಮವಾಗಿ ಒಬ್ಬರ ಹಿಂದೆ ಒಬ್ಬರಂತೆ ಕೊಂಡವನ್ನು ಹಾಯ್ದುರು. ಈ ಸಮಯದಲ್ಲಿ ಮಾದಪ್ಪನ ಭಕ್ತರು ಉಘೇ…ಮಾಯ್ಕಾರ ಮಾದಪ್ಪ ಉಘೇ..ಉಘೇ…ಎಂದು ಕೂಗುವ ಜೈಕಾರವು ಮುಗಿಲು ಮುಟ್ಟುವ ಮೂಲಕ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ರಾತ್ರಿ ಮಾಯ್ಕಾರ ಮುದ್ದು ಮಾದಪ್ಪ ತಂಬಡಗೇರಿಯಲ್ಲಿ ಇರುವ ದುಂಡಮ್ಮನವರ ಮನೆಯಲ್ಲಿ ರಾಗಿ ಮುದ್ದೆ ಸೀಗೆಯ ಸೊಪ್ಪಿನ ಊಟವನ್ನು ಮಾಡಿದ ತಂಬಡಮ್ಮನವರ ಮನೆಯಲ್ಲಿ ಬೇಡಗಂಪಣರ ಆಚಾರ ಪದ್ದತಿಯಂತೆ ಕಟ್ಟುನಿಟ್ಟಿನ ಪೂಜಾ ಕಾರ್ಯಗಳು ಮುಕ್ತಾಯಗೊಂಡ ನಂತರ ವರ್ಷಕ್ಕೊಮ್ಮೆ ಜರುಗುವ ಕೊಂಡೋತ್ಸವ ಸೇವೆಯು ಬೇಡಗಂಪಣ ಅರ್ಚಕ ತಮ್ಮಡಿಗಳು ಉಪವಾಸದಿಂದ ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು 12 ಜನರಿಂದ ಜರುಗಿತು.
ಈ ಸೇವೆಯಲ್ಲಿ ಸಮಸ್ತ ಬೇಡಗಂಪಣ ಕುಲ ಅರ್ಚಕ ಮುಂಖಡರು ಹಾಗೂ ಸರದಿಯ ಅರ್ಚಕರು, ಬೇಡಗಂಪಣ ಕುಲದ ಪಟ್ಟಗಾರರು,
ಬೇಡಗಂಪಣ ಕುಲದ ಗುರುಗಳು ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಯವರ ಸಮ್ಮುಖದಲ್ಲಿ ನೆರವೇರಿತು. ಪ್ರಾಧಿಕಾರ ಕಾರ್ಯದರ್ಶಿ ರಘು ಅವರು ಹಾಜರಿದ್ದರು.