ಮಲೆ ಮಾದಪ್ಪನಿಗೆ ಶ್ರೀ ಗುರು ಪೂರ್ಣಿಮೆಯ ವಿಶೇಷ ಪೂಜೆ

ಹನೂರು: ಜು.14:- ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದಪ್ಪನಿಗೆ ಶ್ರೀ ಗುರು ಪೂರ್ಣಿಮೆಯ ವಿಶೇಷ ಪೂಜೆ ಹಾಗೂ ಬೇಡರ ಕಣ್ಣಪ್ಪ ಸ್ವಾಮಿ ಮತ್ತು ಮಹಾ ಕಾಳಹಸ್ತೇಶ್ವರ ಸ್ವಾಮಿಗೆ ಗುರು ಪೂರ್ಣಿಮೆಯ ವಿಶೇಷ ಅಭಿಶೇಕ ಪೂಜೆಯನ್ನು ಮಾಡಿ ವಿವಿಧ ಆರತಿಯನ್ನು ಬೆಳಗಿ ಮಂಗಳಾರುತಿಯ ಸೇವೆಯ ಜೋತೆಯಲ್ಲಿ ವಿಶೇಷ ನೈವೇದ್ಯವನ್ನು ಸಮರ್ಪಣೆಯನ್ನು ಮಾಡಲಾಯಿತು.
ಮಲೆ ಮಹದೇಶ್ವರ ಸ್ವಾಮಿಯ ದೇಗುಲದಲ್ಲಿ ಬೇಡಗಂಪಣ ಸಂಪ್ರದಾಯದಂತೆ ಬೆಳಗಿನ ಜಾವ ಪ್ರಥಮ ಅಭಿಷೇಕ ಪೂಜೆ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಬೇಡಗಂಪಣ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಮುಂಭಾಗದ ನಂದನ ವನದಲ್ಲಿ ಇರುವ ಮಜ್ಜನ ಪೂಜೆಗೆ ಅಗ್ರೋದಕವನ್ನು ಜಾಗಟೆ ಮಂಗಳ ವಾದ್ಯಗಳ ಸಮೇತವಾಗಿ ಗಂಗೆ ಪೂಜೆ ದಂಡುಕೊಲಿಗೆ ಪೂಜೆಯನ್ನು ಸಲ್ಲಿಸಿ ಮಜ್ಜನ ಬಾವಿಯಿಂದ ಮಲೆ ಮಹದೇಶ್ವರ ಸ್ವಾಮಿಯ ದೇವಾಲಯ ಪ್ರದಕ್ಷಿಣೆ ಮಾಡಿಕೊಂಡು ಬಂದು ಗರ್ಭಗುಡಿಯ ಸ್ವಾಮಿಯ ಅಭಿಶೇಕ ಮಾಡಲು ಅಣಿ ಮಾಡಿಕೊಂಡು.
ಹಸುವಿನ ಪೂಜೆಯನ್ನು ಸಲ್ಲಿಸಿ ಮಾದಪ್ಪನ ಅಭಿಶೇಕ ಮಾಡಲು ಹಾಲನ್ನು ಕರೆತದ್ದು ಶ್ರೀಗಂಧ, ವಿಭೋತಿ, ಜೇನುತುಪ್ಪ, ಪಂಚಾಮೃಂತವನ್ನು ಅಭಿಶೇಕವನ್ನು ಮಾಡಲು ಸ್ವಾಮಿಗೆ ಸಂಕಲ್ಪ, ಪಂಚ ಕಳಸ ಸಮೇತವಾಗಿ ಕೀರಿಟ ಧಾರಣೆ ಹಾಗೂ ಬಿಲ್ವಾರ್ಚನೆ, ಅಲಂಕಾರದೂಂದಿಗೆ ದೂಪ ದೀಪ ನೈವೇದ್ಯ ಸಮರ್ಪಣೆಯನ್ನು ಮಾಡಿ ಮಾದಪ್ಪನಿಗೆ ವಿಶೇಷ ಗುರು ಪೂರ್ಣಿಮೆಯ ಉತ್ಸವನ್ನು ದೇವಾಲಯದ ಒಳ ಆವರಣದಲ್ಲಿ ಬಸವ ಉತ್ಸವನ್ನು ಮಾಡಲಾಯಿತು.
ಈ ಸಮಯದಲ್ಲಿ ದೇವಾಲಯದ ಬೇಡಗಂಪಣ ಸರದಿಯ ಅರ್ಚಕರು ವಿ.ಪುಟ್ಟಮಾದ ತಂಬಡಿ, ಚಿಕ್ಕವೀರ ತಮ್ಮಡಿ ಆಗಮಿಕರಾದ ಪೂನ್ನಾಚಿ ಬುದ್ದಿ, ಕರವೀರಾ ಸ್ವಾಮಿಗಳು ಉಪಕಾರ್ಯದರ್ಶಿ ಎಂ.ಬಸವರಾಜು ಲೇಕ್ಕ ಪರಿಶೋಧಕರು ಪ್ರವೀಣ್ ಪಟೇಲ್ ಹಾಗೂ ಪಾರುಪತ್ತೆದಾರರು ಎಂ.ಮಲ್ಲಿಕಾರ್ಜುನ ಹಾಗೂ ಇನ್ನಿತರರು ಇದ್ದರು.