ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಗಳಲ್ಲಿ: 2.28 ಕೋಟಿ ಸಂಗ್ರಹ

ಹನೂರು ಏ.29:- ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ದೇವಸ್ಥಾನದಲ್ಲಿ ಹುಂಡಿಗಳ ಕಾಣಿಕೆ ಎಣಿಕೆ ಕಾರ್ಯದಲ್ಲಿ 2.28 ಕೋಟಿ ರೂ. ಹೆಚ್ಚು ಸಂಗ್ರಹವಾಗಿದೆ. ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ
ಸಂಕೀರ್ಣದಲ್ಲಿ ಶುಕ್ರವಾರ ಬೆಳಿಗ್ಗೆ ಸಿಸಿ ಕ್ಯಾಮೆರಾ ಕಣ್ಣಾವಲು ಹಾಗೂ ಪೆÇಲೀಸ್ ಬಂದೋಬಸ್ತ್ ನಲ್ಲಿ ಎಣಿಕೆ ಕಾರ್ಯ ಆರಂಭವಾಗಿ ರಾತ್ರಿ 8.30ರವರೆಗೂ ನಡೆಯಿತು. ಈ ಬಾರಿ ಅಮಾವಾಸ್ಯೆ, ವಿಶೇಷ ದಿನಗಳಲ್ಲಿ, ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು ಮಹದೇಶ್ವರ ಬೆಟ್ಟದಲ್ಲಿ ದಿನಾಂಕ 29.03.2023ರಿಂದ 27.04.2023ರ ವರೆಗಿನ 30 ದಿನಗಳಲ್ಲಿ ಸಂಗ್ರಹವಾಗಿರುವ ಹುಂಡಿ ಹಣ ರೂ 2.28,48,500 ರೂ., 86 ಗ್ರಾಂ ಚಿನ್ನ ಹಾಗೂ 2.560 ಗ್ರಾಂ ಬೆಳ್ಳಿ ಸಂಗ್ರಹವಾಗಿರುವುದು ವಿಶೇಷವಾಗಿದೆ.
ಶ್ರೀ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ದ್ವಿತೀಯ ದರ್ಜೆ ಸಹಾಯಕ ಮಹದೇವಸ್ವಾಮಿ, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು, ಮತ್ತು ಸಿಬ್ಬಂದಿ ವರ್ಗ, ಮ.ಬೆಟ್ಟ ಪೆÇಲೀಸ್ ಸಿಬ್ಬಂದಿಗಳು, ಪ್ರಾಧಿಕಾರದ ಸಿಬ್ಬಂದಿಗಳು ಹಾಜರಿದ್ದರು.