ಮಲೆ ಮಹದೇಶ್ವರ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ತ್ಯಾಜ್ಯ ವಸ್ತು ಮಧ್ಯೆ ಪತ್ತೆ

ಚಾಮರಾಜನಗರ, ಮಾ .25- ಗಡಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ತಾಜ್ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಯ ಕರಡಿಗೆ ರಾಜಗೋಪಾರದ ಮುಂಭಾಗ ಪತ್ತೆಯಾಗಿದೆ.
ಇಂದು ಮಧ್ಯಾನ್ಹ ಹೊರಗುತ್ತಿಗೆ ನೌಕರ ಸುನಿಲ್ ಕುಮಾರ್ ಅವರಿಗೆ ಈ ಚಿನ್ನದ ಕರಡಿಗೆ ಸಿಕ್ಜಿದೆ.
ಕೂಡಲೇ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಮೇಶ್ ,ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು‌ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದರು.
ಚಿನ್ನದ ಕರಡಿಗೆ ತ್ಯಾಜ್ಯ ವಸ್ತು ಮಧ್ಯೆ ಸಿಕ್ಕಿದ್ದು ಪೊಲೀಸರು ವಶಪಡಿಸಿಕೊಙಡು ಮಹಜರು ಮಾಡಿ ಕರಡಗಿಯನ್ನು ದೇವಾಲಯಕ್ಕೆ ಹಸ್ತಾಂತರಿಸಿದರು.
ಆದರೆ ಈ ಚಿನ್ನದ ಕರಡಿಗೆ ತ್ಯಾಜ್ಯ ವಸ್ತುಗಳ ಮಧ್ಯೆ ತಂದು ಬಿಸಾಡಿದವರು ಯಾರು ಎಂಬುದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
30 ಗ್ರಾಂ ಚಿನ್ನದ ಕರಡಿಗೆ ವಾರದ ಹಿಂದೆ ನಾಪತ್ತೆಯಾಗಿತ್ತು. ಬುಧವಾರ ಪ್ರಾಧಿಕಾರದ ಕಾರ್ಯದರ್ಶಿ ಅವರು ಠಾಣೆಗೆ ದೂರು ನೀಡಿದ್ದರು.
ವಾರದ ನಂತರ ರಾಜಗೋಪುರದ ಬಳಿಯ ಕಸದ ರಾಶಿಯಲ್ಲಿ ಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಒಂದು ವಾರದಿಂದ ಕರಡಿಗೆ ಅಲ್ಲಿಯೇ ಬಿದ್ದಿರಲು ಸಾಧ್ಯವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಒಟ್ಟಿನಲ್ಲಿ ಪ್ರಕರಣ ಸುಖಾಂತ್ಯ ಕಂಡಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಅರ್ಚಕರ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದ ಬೆನ್ನಲ್ಲೇ ಈ ಚಿನ್ನದ ಕರಡಿಗೆ ನಾಪತ್ತೆಯಾಗಿತ್ತು.