ಮಲೆಯೂರು ಕೃಷಿ ಪತ್ತಿನ ಸಹಕಾರ ಸಂಘದಿಂದ 3 ಕೋಟಿಗೂ ಹೆಚ್ಚು ಹಣ ದುರುಪಯೋಗ: ರೈತರಿಂದ ಪ್ರತಿಭಟನೆ

ಚಾಮರಾಜನಗರ, ಜೂ.16:- ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸದಸ್ಯರ ಚಿನ್ನಾಭರಣದ ಸಾಲ ನೀಡುವ ಮೂಲಕ ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದ್ದಾರೆಎಂದು ಆರೋಪಿಸಿ ರಾಜ್ಯಕಬ್ಬು ಬೆಳೆಗಾರರ ಸಂಘದಅಶ್ರಯದಲ್ಲಿ ಸಂಘದಕಚೇರಿ ಮುಂದೆಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಅಧ್ಯಕ್ಷಎಲ್. ಶಿವಪ್ಪ, ಕಾರ್ಯದರ್ಶಿ ನಾಗೇಂದ್ರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಶೂನ್ಯ ಬಡ್ಡಿದರದಲ್ಲಿರೈತರಚಿನ್ನಾಭರಣದ ಮೇಲೆ ಸಾಲ ನೀಡುತ್ತೇವೆಎಂದು ಚಿನ್ನಾರಭರಣಗಳನ್ನು ಪಡೆದುಕೊಂಡು ಸಾಲ ನೀಡಿದ್ದು, ಮತ್ತೆ ಹಣ ಕಟ್ಟಿಸಿಕೊಂಡು ನಮ್ಮಚಿನ್ನಾಭರಣವನ್ನು ವಾಪಸ್ ನೀಡಲು ಹಿಂದೇಟು ಹಾಕಿದ್ದಾರೆ. ನಮ್ಮ ಚಿನ್ನಾಭರಣಗಳನ್ನು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಆಡಳಿತ ಮಂಡಲಿ ಸದಸ್ಯರುಇತರೇ ಖಾಸಗಿ ಬ್ಯಾಂಕುಗಳನ್ನು ಇಟ್ಟು, ಹೆಚ್ಚಿನ ಹಣ ಪಡೆದು, ನಮ್ಮನ್ನು ವಂಚನೆ ಮಾಡಿದ್ದಾರೆ. ಈ ಕೂಡಲೇಇವರ ವಿರುದ್ದಕ್ರಿಮಿನಾಲ್ ಪ್ರಕರಣದಾಖಲು ಮಾಡಿ ನಮ್ಮಚಿನ್ನಾಭರಣವನ್ನು ಬಿಡಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜೂ.22 ರಂದು ಡಿಸಿ ಕಚೇರಿಗೆ ಮುತ್ತಿಗೆ:
ಪ್ರತಿಭಟನಾ ನೇತೃತ್ವ ವಹಿಸಿದ್ದ ರಾಜ್ಯಕಬ್ಬು ಬೆಳಗಾರರ ಸಂಘದಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮಲೆಯೂರು ಕೃಷಿ ಪತ್ತಿನ ಸಹಕಾರ ಸಂಘದಅಧ್ಯಕ್ಷÀಎಲ್. ಶಿವಪ್ಪ, ಕಾರ್ಯದರ್ಶಿ ನಾಗೇಂದ್ರ ಹಾಗೂ ಆಡಳಿತ ಮಂಡಲಿಯ ಸದಸ್ಯರು ವ್ಯವಸ್ಥಿತವಾಗಿ ಎಂಟು ಗ್ರಾಮಗಳ ಮುಗ್ದ ರೈತರು ಹಾಗೂ ರೈತ ಮಹಿಳೆಯರನ್ನು ವಂಚನೆ ಮಾಡಿದ್ದಾರೆ. ಯಾವುದೇ ಪಿಎಸಿಸಿ ಬ್ಯಾಂಕ್‍ಗಳಲ್ಲಿ ಚಿನ್ನದ ಮೇಲೆ ಸಾಲ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಇಲ್ಲ. ಆದರೆ. ಈ ಸಂಘವು ವಿಶೇಷವಾಗಿ ಈ ಭಾಗದ ರೈತನ್ನು ವಂಚನೆ ಮಾಡುವುದಕೋಸ್ಕರ ಕಳೆದ ಮರ್ನಾಲ್ಕು ವರ್ಷದಿಂದ ರೈತರ ಚಿನ್ನಾಭರಣವನ್ನು ಪಡೆದುಕೊಂಡು ಶೂನ್ಯ ಬಡ್ಡಿ ದರ ಎಂದು ನಂಬಿಸಿ. ಅಲ್ಪ ಮೊತ್ತಕ್ಕೆ ಗಿರಿವಿ ಇಟ್ಟುಕೊಂಡಿದ್ದಾರೆ. ಈಗ ರೈತರು ಚಿನ್ನವನ್ನು ವಾಪಸ್ ಕೊಡುವಂತೆ ಬ್ಯಾಂಕಿಗೆ ಬಂದು ಆಲೆಯುತ್ತಿದ್ದರು. ಹಣ ಕಟ್ಟಿಕೊಂಡು ಚಿನ್ನ ನೀಡುತ್ತಿಲ್ಲ ಎಂದು ದೂರಿದರು.
ಆಡಳಿತ ಮಂಡಳಿ ರೈತರಿಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಈ ವ್ಯಾಪ್ತಿಯ ಮಲೆಯೂರು, ಮುಕ್ಕಡಹಳ್ಳಿ, ಹಿರಿಬೇಗೂರು, ಚಿಕ್ಕಬೇಗೂರು, ಕುಲಗಾಣ, ಅರಳಿಕಟ್ಟೆ, ಮೇಗಲಹುಂಡಿ, ಕೀಳಲಿಪುರ ಸೇರಿದಂತೆ 10ಕ್ಕು ಹೆಚ್ಚು ಗ್ರಾಮಗಳ ರೈತರಿಂದ ಚಿನ್ನಾಭರಣದ ಮೇಲೆ ಸಾಲ ನೀಡಿದ್ದಾರೆ. ಆದರೆ, ಕಳೆದ 2 ವರ್ಷಗಳಿಂದ ರೈತರ ಚಿನ್ನಾರಭಣವನ್ನು ಹಣ ಕೊಟ್ಟರು ಸಹ ವಾಪಸ್ ನೀಡಲು ಸಾಧ್ಯವಾಗಿಲ್ಲ. ಕಾರಣ. ಆಡಳಿತ ಮಂಡಲಿಯವರು ರೈತರಿಂದ ಪಡೆದ ಚಿನ್ನಾಭರಣಗಳನ್ನು ಇತರೇ ಖಾಸಗಿ ಬ್ಯಾಂಕುಗಳಿಗೆ ಅಡವಿ ಇಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರೈತರು ಕಾರ್ಯದರ್ಶಿಯನ್ನು ವಿಚಾರಿಸಿದರೆ ಉಢಾಪೆ ಉತ್ತರ ನೀಡುತ್ತಿದ್ದಾರೆ. ಯಾವುದೇ ಪ್ರತಿಭಟನೆ ಮಾಡಿದರು, ಡಿಸಿಗೆ ಹೇಳಿದರು ಸಹ ನನ್ನನ್ನು ಏನು ಮಾಡಲು ಆಗುವುದಿಲ್ಲ ಎಂದು ಸಾಲ ಪಡೆದುಕೊಂಡಿರುವ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಭಾಗ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಇದೊಂದು ದೊಡ್ಡ ವಂಚನೆ ಪ್ರಕರಣವಾಗಿದ್ದು, ಮುಗ್ದ ರೈತರಿಗೆ ಶೂನ್ಯ ಬಡ್ಡಿ ದರ ಎಂದು ಆಸೆ ತೋರಿಸಿ, ಅವರಿಂದ ನೂರಾರು ಗ್ರಾಂಗಳ ಚಿನ್ನ ಪಡೆದು ವಂಚನೆ ಮಾಡುವ ಉದ್ದೇಶವನ್ನು ಆಡಳಿತ ಮಂಡಲಿ ಹೊಂದಿದೆ. ಹೀಗಾಗಿ ಬ್ಯಾಂಕಿನಿಂದ ನೂರಾರು ಸಂಖ್ಯೆಯಲ್ಲಿ ರೈತರು ಹಾಗೂ ನೊಂದ ಫಲಾನುಭವಿಗಳು ಪ್ರತಿಭಟನೆ ಮಾಡಿದ್ದರು ಸಹ ಅಧ್ಯಕ್ಷ ಶಿವಣ್ಣ, ಹಾಗೂ ನಿರ್ದೇಶಕರು ಸಂಘದ ಕಚೇರಿಗೆ ಬರಲಿಲ್ಲ. ಅಲ್ಲದೇ ಬ್ಯಾಂಕ್‍ನ ಕಡೆಗೆ ಮುಖವನ್ನು ಸಹ ಮಾಡಿಲ್ಲ. ಇದರ ಅರ್ಥ ಆಡಳಿತ ಮಂಡಲಿ ಹಾಗೂ ಕಾರ್ಯದರ್ಶಿ ಸೇರಿ ರೈತರ ಹಣವನ್ನು ಲಪಾಟಿಸಿದ್ದಾರೆ. ಸಹಕಾರ ಸಂಘಗಳ ನಿಬಂಧಕರು ಹಾಗೂ ಸಬ್ ರಿಜಿಸ್ಟ್ರಾರ್ ಪ್ರಕರಣ ದಾಖಲು ಮಾಡಿ ಸಂಘವನ್ನು ಸೂಪರ್‍ಸೀಡ್ ಮಾಡಿ, ಸಂಘದ ವಿರುದ್ದ ತನಿಖೆ ಮಾಡಿ, ರೈತರಿಗೆ ನ್ಯಾಯ ಕೊಡಿಸುವವರೆಗೆ ಜಿಲ್ಲಾಡಳಿತ ಭವನದ ಮುಂದೆ ಅನಿದಿμÁ್ರ್ಟವಧಿ ಮುಷ್ಕರವನ್ನು ನಡೆಸುವುದಾಗಿ ಭಾಗ್ಯರಾಜ್ ಎಚ್ಚರಿಸಿದರು.
ಮಲೆಯೂರು ಸಂಘದ ಅಧ್ಯಕ್ಷ ಶಿವಪ್ಪ ಹೊಣೆಗಾರ :
ಮಲೆಯೂರು ಸಹಕಾರ ಸಂಘದ ಕಾರ್ಯದರ್ಶಿ ನಾಗೇಂದ್ರ ವಿರುದ್ದ ದೂರು ನೀಡಿದರೆ ಪ್ರಯೋಜನವಿಲ್ಲ. ಈ ವಂಚನೆ ಪ್ರಕರಣದಲ್ಲಿ ಪ್ರಮುಖವಾಗಿ ಸಂಘದ ಅಧ್ಯಕ್ಷ ಎಲ್. ಶಿವಪ್ಪ ಪಾಲುದಾರರು ಇದಕ್ಕೆ ಆಡಳಿತದ ಬೆಂಬಲವು ಇದೆ. ಹೀಗಾಗಿ ಇವರ ವಿರುದ್ದ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಹಿರಿಬೇಗೂರು ಗುರುಸ್ವಾಮಿ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಶಿವಪ್ಪ ಬ್ಯಾಂಕಿನಲ್ಲಿ ಗೋಲ್‍ಮಾಲ್ ಮಾಡಿ ಮೈಸೂರಿನಲ್ಲಿ ಮಗಳ ಹೆಸರಿನಲ್ಲಿ ಮನೆ ಖರೀದಿ ಮಾಡಿದ್ದಾರೆ. ಕಾರ್ಯದರ್ಶಿ, ಹಾಗು ನಿರ್ದೇಶಕರು ಈ ಅವಧಿಯಲ್ಲಿ ಬೇನಾಮಿ ಅಸ್ತಿಗಳನ್ನು ಮಾಡಿದ್ದಾರೆ. ಇವೆಲ್ಲವನ್ನು ತನಿಖೆ ನಡೆಸಿ, ಅವರ ಅಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನೊಂದ ಬಡವರಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಮೂಕಹಳ್ಳಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ಮೂಡ್ಲುಪುರ ನಾಗರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ನಂಜುಂಡನಾಯಕ, ಉಡಿಗಾಲ ಮಂಜು, ಗೌಡಿಕೆ ಸ್ವಾಮಪ್ಪ, ಸೋಮಣ್ಣ, ಉಡಿಗಾಲ ಮಂಜುನಾಥ್, ಮಹದೇವಸ್ವಾಮಿ, ಬಸವರಾಜಪ್ಪ, ಹಿರಿಬೇಗೂರು ಗುರುಸ್ವಾಮಿ, ಪಟೇಲ್ ಶಿವಮೂರ್ತಿ, ಮುಕ್ಕಡಹಳ್ಳಿ ಗಿರಿಜಾ, ಲಕ್ಷ್ಮಮ್ಮ, ಪ್ರವೀಣ್ ಸೇರಿದಂತೆ ನೂರಾರು ರೈತರು, ಮಹಿಳೆಯರು ಭಾಗವಹಿಸಿದ್ದರು.