ಮಲೆಯಾಳಂ ನಟ ಶರತ್ ನಿಗೂಢ ಸಾವು

ಕೊಚ್ಚಿ, ಜು. ೩೦- “ಅಂಗಮಾಲಿ ಡೈರೀಸ್ ಸಿನಿಮಾ ಖ್ಯಾತಿಯ ಮಾಲಿವುಡ್‌ನಟ, ಶರತ್‌ಚಂದ್ರನ್‌ಶವವಾಗಿ ಪತ್ತೆ ಯಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣವಾಗಲಿ, ಹೇಗೆ ಸಾವನ್ನಪ್ಪಿದರು ಎಂಬ ಮಾಹಿತಿ ಲಭ್ಯವಾಗಿಲ್ಲ, ಅವರಿಗೆ ೩೭ ವರ್ಷ ವಯಸ್ಸಾಗಿತ್ತು.
ಇವರ ಸಾವಿನ ಸುದ್ದಿ ಬಗ್ಗೆ “ಅಂಗಮಾಲಿ ಡೈರೀಸ್ ಚಿತ್ರದಲ್ಲಿ ನಟಿಸಿದ್ದ, ಅಂಥೋನಿ ವರ್ಗಿಸ್‌ತಮ್ಮ ಸೋಷಿಯಲ್‌ಮೀಡಿಯಾ ಪುಟದಲ್ಲಿ ರೀಪ್‌ಬ್ರದರ್‌ಎಂದು ಬರೆದುಕೊಂಡಿದ್ದಾರೆ.
ಐಟಿ ಕಂಪನಿಯಲ್ಲಿ ಕೆಲ ವರ್ಷ ಕೆಲಸ ಮಾಡಿದ್ದ ಶರತ್, ಅದಾದ ಬಳಿಕ ಡಬ್ಬಿಂಗ್‌ಕಲಾವಿದನಾಗಿಯೂ ಕೆಲಸ ಮಾಡಿದ. ಹೀಗಿರುವಾಗಲೇ ೨೦೧೬ರಲ್ಲಿ “ಅನೀಸ್ಯಾ ಸಿನಿಮಾ ಮೂಲಕ ಮಾಲಿವುಡ್‌ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
“ಅನೀಸ್ಯಾ ಬಳಿಕ “ಕೋಡೆ”, ಒರು ಮ್ಯಾಕ್ಸಿಕನ್‌ಅಪಾರ್ಥ ಸಿನಿಮಾಗಳಲ್ಲಿಯೂ ನಟಿಸಿದರು. ೨೦೧೭ರಲ್ಲಿ ತೆರೆಗೆ ಬಂದ “ಅಂಗಮಾಲಿ ಡೈರೀಸ್ ಸಿನಿಮಾ ಮೂಲಕ ಗುರುತಿಸಿಕೊಂಡರು.
ಶರತ್ ತಮ್ಮ ಚಿತ್ರ ಅಂಗಮಾಲಿ ಡೈರೀಸ್ ಮೂಲಕ ಪ್ರಸಿದ್ಧಿ ಪಡೆದಿದ್ದು, ಇತರ ಜನಪ್ರಿಯ ಚಿತ್ರಗಳಲ್ಲಿ ಕೂಡೆ, ಒರು ಮೆಕ್ಸಿಕನ್ ಅಪರಥ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಶರತ್‌ತಂದೆ ಚಂದ್ರನ್ ಮತ್ತು ಲೀಲಾ ಅವರನ್ನ ಅಗಲಿದ್ದು, ಶ್ಯಾಮ್ ಚಂದ್ರನ್ ಎಂಬ ಸಹೋದರನೂ ಇದ್ದರು ಎನ್ನಲಾಗಿದೆ.