ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥ ಸೇವೆ ಆರಂಭ

ಹನೂರು: ಜೂ.26:- ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ಭಕ್ತಾದಿಗಳ ಬಹು ನಿರೀಕ್ಷಿತ ಬೆಳ್ಳಿ ರಥೋತ್ಸವದ ಸೇವೆ ಇಂದಿನಿಂದ ಆರಂಭವಾಗಿದ್ದು ಭಕ್ತರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಕಣ್ತುಂಬಿಕೊಂಡಿದ್ದಾರೆ.
ಶ್ರೀ ಮಹದೇಶ್ವರ ಸ್ವಾಮಿಯ ಬೆಳ್ಳಿ ರಥೋತ್ಸವವಕ್ಕೆ ಇಂದು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳವರ ನೇತೃತ್ವದಲ್ಲಿ ಬೆಳ್ಳಿ ರಥೋತ್ಸವಕ್ಕೆ ಧಾರ್ಮಿಕ ವಿಧಿವಿಧಾನಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಭಕ್ತರ ಪೂಜೆ ಸೇವೆಗೆ ಅವಕಾಶ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ರಮೇಶ್, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿದೇವಿ ಹಾಗೂ ಹಿಂದಿನ ಕಾರ್ಯದರ್ಶಿಗಳಾಗಿದ್ದಂತಹ ಶ್ರೀ ಜಯವಿಭಸ್ವಾಮಿಯವರ ಇನ್ನೂ ಅನೇಕರ ಸಮ್ಮುಖದಲ್ಲಿ ಬೆಳ್ಳಿರಥಕ್ಕೆ ಚಾಲನೆ ನೀಡಲಾಯಿತು.
ಮಹದೇಶ್ವರ ಬೆಟ್ಟ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರು ಕಾಣಿಕೆಯಾಗಿ ನೀಡಿರುವ 508 ಕೆಜಿ ಶುದ್ಧ ಬೆಳ್ಳಿಯಿಂದ ವಿಗ್ರಹಗಳು ರಥವನ್ನು ನಿರ್ಮಾಣ ಮಾಡಲಾಗಿದ್ದು. ಮಹದೇಶ್ವರ ಬೆಟ್ಟ ಪ್ರಾಧಿಕಾರ ಆಡಳಿತ ಮಂಡಳಿ ವತಿಯಿಂದ ರಥೋತ್ಸವ ಸೇವಾ ಕೈಂಕರ್ಯಗಳು ನಡೆಯಲಿದೆ.
ತಮಿಳುನಾಡಿನ ಸೇಲಂನ ಶಿಲ್ಪಗಾರರಾದ ಸಂಪತ್ತು ಮತ್ತು ತಂಡದವರು ಸುಮಾರು . 508 ಕೆಜಿ ಬೆಳ್ಳಿಯಲ್ಲಿ ಬೆಳ್ಳಿ ರಥವನ್ನು ಪೂಣ9 ಗೊಳಿಸಿದ್ದು ಭಾನುವಾರ ಅಷಾಡ ವೈವಸ್ವತ ಸಪ್ತಮಿ ದಿನದೊಂದು ಮಾದಪ್ಪನ ಭಕ್ತರಿಗೆ ಪ್ರತಿ ದಿನ ಬೆಳಿಗ್ಗೆ 8-00 ಘಂಟೆಯಿಂದ ಭಕ್ತಧಿಗಳಿಗೆ ಸೇವೆಗೆ ಅವಕಾಶ ಸಿಗುವ ನಿರೀಕ್ಷೆ ಇದು ಇಂದು ಬೆಳ್ಳಿ ರಥೋತ್ಸವಕ್ಕೆ ಇಂದಿನಿಂದ ಚಾಲನೆ ನೀಡಲಾಯಿತು.