ಮಲೆಮಹದೇಶ್ವರನಿಗೆ ಬಂತು 27 ದಿನಕ್ಕೆ 1.70 ಕೋಟಿರೂ. ಕಾಣಿಕೆ, ಕೆಜಿ ಗಟ್ಟಲೇ ಆಭರಣ

ಹನೂರು: ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಸುಮಾರು 1. 70 ಕೋಟಿ ರೂಗಳು ಸಂಗ್ರಹವಾಗಿದೆ.
ಮಲೈ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ದೇವರಿಗೆ ಹರಕೆ ಪೂಜೆ ಸಲ್ಲಿಸಿದ
ದಿನಾಂಕ 27. 06. 2022 ರಿಂದ 13. 07. 2022 ರವರೆಗೆ ಸಂಗ್ರಹವಾದ ಹಣ ಎಣಿಕೆ ಕಾರ್ಯದಲ್ಲಿ 1.70. 65. 814 ಕೋಟಿ ರೂಗಳು ಹಾಗೂ ಬೆಳ್ಳಿ 1.400 ಕೆಜಿ, ಚಿನ್ನ 80 ಗ್ರಾಂ ಸಂಗ್ರಹಣೆಯಾಗಿದೆ.
ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಹಣ ಎಣಿಕೆ ಕಾರ್ಯವು ಪ್ರಾಧಿಕಾರದ ನೌಕರರು ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಹಾಜರಿದ್ದರು, ಈ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕ್ಯಾಥಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು ಹಾಗು ಸಿಬ್ಬಂದಿ ನೌಕರರಗಳು ಇದ್ದರು.
ಮಲೈ ಮಹದೇಶ್ವರ ಬೆಟ್ಟ ಹುಂಡಿ ಹಣ ಎಣಿಕೆ ಸಮಯದಲ್ಲಿ ಪೌರಕಾರ್ಮಿಕ ಪನ್ನೀರ್ ಸೆಲ್ವಂ ಎಂಬಾತ 40. ಸಾವಿರ ರೂ. ಹಣ ಕಳವು ಮಾಡಿ ಸಿಕ್ಕಿಬಿದ್ದಿದ್ದಾನೆ. ಹೊರ ಗುತ್ತಿಗೆ ನೌಕರನಾದ ಈತ ವಾಣಿಜ್ಯ ಸಂಕೀರ್ಣದಲ್ಲಿ ಹಣ ಎಣಿಕೆ ಸಂದರ್ಭದಲ್ಲಿ ಹಣವನ್ನು ಜೆಬಿಗೆ ಹಾಕಿಕೊಳ್ಳುತ್ತಿದ್ದಾನೆ ಎಂದು ಅನುಮಾನ ಬಂದು ಪ್ರಾಧಿಕಾರದ ಅಧಿಕಾರಿಗಳು ಈತನನ್ನು ತಪಾಸಣೆ ಒಳಪಡಿಸಿದ್ದಾರೆ.
ಹೊರಗುತ್ತಿಗೆ ನೌಕರ ಪನ್ನೀರ್ ಸೆಲ್ವಂನನ್ನು ತಪಾಸಣೆ ಒಳಪಡಿಸಿದಾಗ 500 ಮುಖಬೆಲೆಯ 80 ನೋಟುಗಳು ಜೇಬಿನಲ್ಲಿ ಹಾಕಿಕೊಂಡಿರುವುದು ದುರ್ಡಪಟ್ಟಿದೆ.
ಈತನ ವಿರುದ್ಧ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ದೂರು ನೀಡಿದ್ದು ಮಹಾದೇಶ್ವರ ಬೆಟ್ಟ ಪೆÇಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಬಸವರಾಜ್ ಅವರು ಪ್ರಕರಣ ದಾಖಲಿಸಿಕೊಂಡು. ಆರೋಪಿ ಪನ್ನೀರ್ ಸೆಲ್ವಂ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.