ಮಲೆಬೆನ್ನೂರು ಪೋಲಿಸ್ ಠಾಣೆಯಲ್ಲಿ ಔಷಧೀಯ ಸಸ್ಯಗಳ ಉದ್ಯಾನವನ

ಹರಿಹರ.ಡಿ.16  ಸಮಾಜದಲ್ಲಿ ಬಹಳಷ್ಟು ಜನ ಹಲವಾರು ದೈಹಿಕ, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದು ಬಹಳಷ್ಟು ವ್ಯಾದಿಗಳಿಗೆ ಆಯುರ್ವೇದದ ಹಲವಾರು ಗಿಡ ಮೂಲಿಕೆಗಳ ಔಷಧಿಗಳು ಉತ್ತಮ ಪರಿಣಾಮಗಳನ್ನು ನೀಡುತ್ತವೆಂದು ದಾವಣಗೆರೆ ಜಿಲ್ಲಾ ವರಿಷ್ಠಾಧಿಕಾರಿ  ಹನುಮಂತರಾಯ ತಿಳಿಸಿದರು. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಔಷಧಿ ಗುಣಗಳಿರುವ ಉದ್ಯಾನವನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಭಾರತ ದೇಶ ಮತ್ತು ಕರ್ನಾಟಕ ರಾಜ್ಯ ಕನ್ನಡ ನಾಡುನುಡಿ ಸಂಪತ್ತು ಸಂಸ್ಕೃತಿ ಸಂಸ್ಕರಣೆ ಕಲೆ ಸಾಹಿತ್ಯದ ಜೊತೆಗೆ ಅಪಾರ ಸಸ್ಯ ಸಂಪತ್ತನ್ನು ಹೊಂದಿರುವ ದೇಶ ನಮ್ಮದು ಪಶ್ಚಿಮ ಘಟ್ಟದ ಸೆರಗಿನಲ್ಲಿ ಬರುವ ಪ್ರದೇಶ ಅಪಾರ ಜೀವ ವೈವಿಧ್ಯತೆ ಬಹುಉಪಯೋಗಿ ಔಷಧೀಯ ಗುಣಗಳುಳ್ಳ ಸಸ್ಯ ಸಂಕುಲ ಇದರ ಮಡಿಲಲ್ಲಿ ಇದೆ ಇವುಗಳ ಮಹತ್ವ ಮತ್ತು ಇರುವಿಕೆ ಬಗ್ಗೆ ಬೆಳಕು ಚೆಲ್ಲುವ ಸಮಗ್ರ ಔಷಧಿವನವನ್ನು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ವೃತ್ತ ನಿರೀಕ್ಷಕರು ಮಲೆಬೆನ್ನೂರು ಠಾಣೆ ಪಿಎಸ್ಸೈ ಇವರುಗಳು ಉದ್ಯಾನವನವನ್ನು ನಿರ್ಮಿಸಿ ಸಸ್ಯ ಸಂಪತ್ತಿನ ರಕ್ಷಣೆ ಪೋಷಣೆ ನಿಟ್ಟಿನಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯಿಂದ ತುಂಬುಹೃದಯದ ಅಭಿನಂದನೆಗಳು ಸಲ್ಲಿಸಿದರು 
ಹಿಂದಿನ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿಯೇ ತರಕಾರಿ ಹಣ್ಣುಹಂಪಲುಗಳು ಜೊತೆಗೆ ಔಷಧೀಯ ಸಸ್ಯಗಳನ್ನು ಕೂಡ ಹಿರಿಯವರು ಬೆಳಸುತ್ತಿದ್ದರು ಇದರಿಂದ ಮನೆಯ ಔಷಧೋಪಚಾರದ ಸಮಸ್ಯೆ ಬಗೆಹರಿಯುತ್ತಿತ್ತು ಜೊತೆಗೆ ಮನೆಗೂ ಕೀಟಗಳಿಂದ ರಕ್ಷಣೆ ದೊರೆಯುತ್ತಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಅಪಾರ್ಟ್ ಮೆಂಟ್ ಯುಗದಲ್ಲಿ ಹಿತ್ತಲು ಎಂಬುದಕ್ಕೆ ಜಾಗವೇ ಇಲ್ಲದಂತಾಗಿದೆ ಆದರೆ ಪೊಲೀಸ್ ಇಲಾಖೆಯ ಕೆಲಸದ ಒತ್ತಡದಲ್ಲೂ ಪರಿಸರ ಉಳಿಸಿ ಬೆಳೆಸಿ ಎನ್ನುವುದರ ಜೊತೆಗೆ ಔಷಧಿ ವನವನ್ನು ನಿರ್ಮಿಸಿದ್ದಾರೆ ಔಷಧಿ ಗುಣಗಳಿರುವ ಸಸಿಗಳಿಂದ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರಿಗೂ ಪ್ರತಿಯೊಬ್ಬರಿಗೂ ಅನುಕೂಲ ವಾಗುವ ರೀತಿಯಲ್ಲಿ ಉದ್ಯಾನವನ ನಿರ್ಮಿಸಿ ಪ್ರತಿಯೊಬ್ಬರಿಗೂ ಪೋಲಿಸ್ ಇಲಾಖೆಯವರು ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಅಧಿಕಾರಿ ಮಹಾಂತೇಶ್ ಬಿಳಗಿ  ಅಭಿಪ್ರಾಯ ವ್ಯಕ್ತಪಡಿಸಿದರು
ದಾವಣಗೆರೆ ಗ್ರಾಮಾಂತರ ಉಪ ಅಧೀಕ್ಷಕರಾದ ನರಸಿಂಹ ತಾಮ್ರಧ್ವಜ ಮಾತನಾಡಿ ನಮ್ಮ ಸುತ್ತಮುತ್ತಲಿನ ಪ್ರಕೃತಿಯೇ ವಿಸ್ಮಯ ನಿಜವಾಗಿಯೂ ನಾವುಗಳು ಇಂಥ ಪ್ರಕೃತಿಯಲ್ಲಿ ಜನಿಸಿರುವುದು ನಮ್ಮ ಪುಣ್ಯ ತಾನು ಸೃಷ್ಟಿ ಮಾಡಿದ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ವೈಶಿಷ್ಟ್ಯಗಳನ್ನು ಕೊಟ್ಟು ಪ್ರಕೃತಿಯ ಸೊಬಗನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಿದ್ದಾನೆ ನಮ್ಮ ಸುತ್ತಮುತ್ತ ಕಂಡುಬರುವ ಗಿಡ ಮರ ಬಳ್ಳಿ ಕಾಡು ನದಿ ಹೀಗೆ ಹತ್ತು ಹಲವಾರು ನೈಸರ್ಗಿಕ ವಿಷಯಗಳನ್ನು ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿನ ಗಿಡ ಮರ ಬಳ್ಳಿಗಳಿಗೆ ಔಷಧೀಯ ಗುಣಗಳಿ ಇರುವುದರಿಂದಲೇ ಇಂದಿನ ಪೂರ್ವಜರು ನೈಸರ್ಗಿಕವಾಗಿ ಬೆಳೆಯುವ ಸಸ್ಯಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದ್ದರು ಅದರಂತೆ ನಮ್ಮ ಪೋಲಿಸ್ ಅಧಿಕಾರಿಗಳು ಅಪರಾಧ ಪ್ರಕರಣಗಳು ಸಂಚಾರಿ ನಿಯಮ ಇನ್ನು ಇತರ ಕರ್ತವ್ಯಗಳ ನಿರ್ವಹಿಸುವುದರ ಜೊತೆಗೆ ಔಷಧಿ ವನ ವನ್ನು ನಿರ್ಮಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಹರಿಹರ ವೃತ್ತನಿರಕ್ಷಕ ಶಿವಪ್ರಸಾದ್ ಎಂ,  ಮುಖ್ಯಮಂತ್ರಿ ಪದಕ ವಿಜೇತರಾದ ವೀರಬಸಪ್ಪ ಕುಸಲಾಪುರ,  ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ಐ ಡಿ ರವಿಕುಮಾರ್. ಮಲೆಬೆನ್ನೂರು ಕಂದಾಯ ಇಲಾಖೆಯ ಉಪತಹಶೀಲ್ದಾರ್ ರವಿ,ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್,  ಗ್ರಾಮಲೆಕ್ಕಾಧಿಕಾರಿ ಕೊಟ್ರೇಶ್, ಪೋಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.