‘ಮಲೆನಾಡ ಗೊಂಬೆಗೆ’ ಮನಸೋತ ಉಪೇಂದ್ರ ಸಾಥ್

ಗ್ರಾಮೀಣ ಸೊಗಡು ಮತ್ತು ನೈಜಘಟನೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ “ಕೆರೆ ಬೇಟೆ” ಚಿತ್ರದ ಮಲೆನಾಡ ಗೊಂಬೆ ಹಾಡನ್ನು ನಟ ಉಪೇಂದ್ರ ಬಿಡುಗಡೆ ಮಾಡಿ ಮನಸಾರೆ ಮೆಚ್ಚಿಕೊಂಡಿದ್ದಾರೆ. ಇದು ಚಿತ್ರತಂಡಕ್ಕೆ ಆನೆ ಬಲ ಬಂದಂತಾಗಿದೆ.

ಇದರ ಬೆನ್ನಲ್ಲೇ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ನಟ, ನಿರ್ಮಾಪಕರೂ ಆಗಿರುವ ಗೌರಿ ಶಂಕರ್ ಮತ್ತು ಅವರ ತಂಡ

‘ಮಲೆನಾಡ ಬೊಂಬೆ’ ಹಾಡನ್ನು ಮಲೆನಾಡಿನ ಸುತ್ತಮುತ್ತವೇ ಈ ಹಾಡಿನ ಚಿತ್ರೀಕರಣ ಮಾಡಿರುವುದು ವಿಶೇಷ. ‘ಕೆರೆಬೇಟೆ’ ಚಿತ್ರಕ್ಕೆ  ನಿರ್ದೇಶಕ ರಾಜ್ ಗುರು ನಿರ್ದೇಶನ ಮಾಡಿದ್ದಾರೆ

ಗೌರಿಶಂಕರ್‍ಗೆ ನಾಯಕಿಯಾಗಿ ಬಿಂಧು ಶಿವರಾಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ರೋಮ್ಯಾಂಟಿಕ್ ಹಾಡು ಇದಾಗಿದೆ. ಪ್ರಮೋದ್ ಮರುವಂತೆ ಸಾಹಿತ್ಯ ರಚಿಸಿದ್ದಾರೆ. ಗಗನ್ ಬದೇರಿಯಾ ಸಂಗೀತದ ಹಾಡಿಗೆ  ಸಾಯಿ ವಿಘ್ನೇಶ್ ಮತ್ತು ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ.

ನಟ ಗೌರಿಶಂಕರ್ ಮಾತನಾಡಿ ಹಾಡನ್ನು ತುಂಬಾ ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಅತಿಯಾದ ಮಳೆಯಿಂದ ಅನೇಕ ಬಾರಿ ಚಿತ್ರಿಕರಣ ನಿಲ್ಲಿಸಲಾಗಿತ್ತು. ಮನುಷ್ಯರೇ ಓಡಾಡದೇ ಇರುವ ಜಾಗದಲ್ಲಿ ಚಿತ್ರೀಕರ ಮಾಡಿದ್ದೇವೆ. ಪ್ರಾಣಿಗಳ ಭಯ ಕೂಡ ಇತ್ತು. ಮಲೆನಾಡಿನ ತುಂಬಾ ರಿಮೋಟ್ ಏರಿಯಾದಲ್ಲಿ ನಾಲ್ಕು ದಿನಗಳ ಕಾಲ ಈ ಹಾಡನ್ನು ಸೆರೆಹಿಡಿದಿದ್ದೇವೆ ಎಂದಿದ್ದಾರೆ

ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ  ಚಿತ್ರ ಬರಲಿದೆ. ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.