ಮಲೆನಾಡಿನ ಸಂಸ್ಕøತಿ ಸೊಗಡು ಅನಾವರಣ

ಮಲೆನಾಡಿನ ಮೀನುಗಾರಿಕೆ, ಅಲ್ಲಿನ ಸಂಸ್ಕøತಿ, ಭಾಷೆಯ ಸೊಗಡನ್ನು ಪ್ರಧಾನವಾಗಿರಿಸಿಕೊಂಡ ಪ್ರತಿಭಾನ್ವಿತ ನಟ ಗೌರಿಶಂಕರ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ” ಕೆರೆಬೇಟೆ” ರಾಜ್ಯಾದ್ಯಂತ ಮೀನುಬೇಟೆಯ ಮೂಲಕ ಜನರ ಮನಗೆಲ್ಲಲು ಮುಂದಾಗಿದೆ.

ರಾಜ್‍ಗುರು ಆಕ್ಷನ್‍ಕಟ್ ಹೇಳಿರುವ ಚಿತ್ರದ ಮೂಲಕ ಮಲೆನಾಡಿನ ಸಂಸ್ಕøತಿ, ಅಲ್ಲಿನ ಪರಿಸರ, ಮೀನುಬೇಟೆ ಸೇರಿದಂತೆ ಮತ್ತಿತರ ವಿಷಯಗಳನು ಸಿನಿಮಾಕ್ಕೆ ಹೊಂದಿಕೊಳ್ಳುವ ಹಾಗೆ ಜೊತೆಗೆ ಪ್ರೇಕ್ಷಕರಿಗೆ ರಂಜಿಸುವ ಮೂಲಕ ಹೊಸ ತನದ ಕಥೆಯನ್ನು ಜನರ ಮುಂದೆ ಇಡಲು ನಟ ಗೌರಿಶಂಕರ್ ಮತ್ತೆ ಅವರ ತಂಡ ಮುಂದಾಗಿದೆ.

ಈಗಾಗಲೇ ಚಿತ್ರಕ್ಕ ನಟ ಡಾಲಿ ಧನಂಜಯ, ಕಿಚ್ಚ ಸುದೀಪ್, ನಿರ್ಮಾಪಕ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವರು ಶುಭಹಾರೈಸಿದ್ದು ನಿರ್ದೇಶಕ ದಿನಕರ್ ತೂಗದೀಪ ಚಿತ್ರವನ್ನು ಪ್ರೆಸೆಂಟ್ ಮಾಡಿದ್ದಾರೆ.ಹೀಗಾಗಿ ಚಿತ್ರ ರಾಜ್ಯಾದ್ಯಂತ ಕುತೂಹಲ ಹೆಚ್ಚು ಮಾಡಿದೆ.

ನಾಳೆ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ, ನಾಯಕಿಯಾಗಿ ಬಿಂಧು ಶಿವರಾಮ್ ನಟಿಸಿದ್ದು ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಟ ಗೌರಿಶಂಕರ್, ಚಿತ್ರದ ಪ್ರಚಾರ ಮಾಡಿದ ಬಗೆ, ಟೀಸರ್, ಟ್ರೈಲರ್ ಜನರ ಗಮನ ಸೆಳೆದಿದೆ. ಚಿತ್ರಮಂದಿರದ ಮಾಲೀಕರು ತಾವೇ ಖುದ್ದಾಗಿ ಚಿತ್ರ ಕೇಳುತ್ತಿರುವುದು ಖುಷಿ ಆಗಿದೆ. ಚಿತ್ರವನ್ನು ಫ್ಯಾಶನ್ ಮತ್ತು ಶ್ರದ್ದೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನಮ್ಮದು.

ಯಾವುದೇ ಸ್ಟಾರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಚಿತ್ರಕ್ಕೆ ಏನೆಲ್ಲಾ ಬೇಕು ಅದನ್ನು ಪೂರೈಸಿದ್ದೇವೆ. ಚಿತ್ರದ ಕಥೆ ಮಲೆನಾಡಿನ ಭಾಗದ್ದೇ ಆದರೂ ಎಲ್ಲರಿಗೂ ಅನ್ವಯವಾಗುವ ಕಥೆ, ಮಲೆನಾಡಿನ ಸೊಗಡು ಮತ್ತು ಅಲ್ಲಿನ ಭಾಷೆಯನ್ನು ಚಿತ್ರದಲ್ಲಿ ಸಮರ್ಥವಾಗಿ ಬಳಿಸಿದ್ದೇವೆ. ಗಗನ್ ಬಡೇರಿಯಾ  ಸಂಭಾಷಣೆ, ಹಾಡುಗಳು ಗಮನ ಸೆಳೆದಿದೆ. ನಾವು ನಮ್ಮ ಕೆಲಸವನ್ನು ಪ್ರೀತಿ,ಅಭಿಮಾನದಿಂದ ಮಾಡಿದ್ದೇವೆ, ನಮ್ಮ ಶ್ರಮ ಮತ್ತು ಕೆಲಸವನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ. ಅವರು ನೋಡಿ ಮೆಚ್ಚಿಕೊಂಡರೆ ಸಾರ್ಥಕ ಎಂದರು