
ಶಿವಮೊಗ್ಗ, ಆ. 31; ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟಮುಂದುವರಿದಿದೆ. ಜೂನ್ ತಿಂಗಳಲ್ಲಿ ದುರ್ಬಲಗೊಂಡಿದ್ದ ವರ್ಷಧಾರೆಯಿಂದ ಕವಿದಿದ್ದ ಬರ
ಸ್ಥಿತಿಜುಲೈ ತಿಂಗಳ ಮಳೆಯಿಂದ ಮರೆಯಾಗಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆಕೈಕೊಟ್ಟಿರುವುದರ ಜೊತೆಗೆ, ಬೇಸಿಗೆ ಬಿಸಿಲು ಬೀಳಲಾರಂಭಿಸಿದೆ. ಇದರಿಂದ ಬರದ ಕರಿಛಾಯೆ
ಮತ್ತೇ ಆವರಿಸುವಂತಾಗಿದೆ!ಕಳೆದ ವರ್ಷ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿತ್ತು. ಈ ವೇಳೆಗಾಗಲೇ ಜಿಲ್ಲೆಯ ಎಲ್ಲಜಲಾಶಯಗಳು, ಕೆರೆಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಹಲವೆಡೆ ಭಾರೀ ಮಳೆಯಿಂದಅತೀವೃಷ್ಟಿ ಭೀತಿ ಎದುರಾಗುವಂತಾಗಿತ್ತು. ಪ್ರಸ್ತುತ ವರ್ಷ ಆಗಸ್ಟ್ ತಿಂಗಳುಅಂತ್ಯಗೊಳ್ಳಲಾರಂಭಿಸಿದ್ದರೂ, ಪ್ರಮುಖ ಡ್ಯಾಂಗಳು ಭರ್ತಿಯಾಗಿಲ್ಲ. ಹಲವುತಾಲೂಕುಗಳಲ್ಲಿ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ.ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ಹಲವೆಡೆಮೆಕ್ಕೆಜೋಳ ಬಿಸಿಲಿಗೆ ಒಣಗಲಾರಂಭಿಸಿದೆ. ಗಿಡಗಳ ಬೆಳವಣಿಗೆ ಕುಂಠಿತವಾಗಿದೆ.ತೆನೆಕಟ್ಟುವ ಹಂತದಲ್ಲಿ ಮಳೆ ಕೊರತೆ ಎದುರಾಗಿರುವುದರಿಂದ, ನಿರೀಕ್ಷಿತ ಇಳುವರಿಸಾಧ್ಯವಾಗುವುದಿಲ್ಲ ಎಂದು ಮೆಕ್ಕೆಜೋಳ ಬೆಳೆಗಾರರು ಹೇಳುತ್ತಾರೆ.ಮತ್ತೊಂದೆಡೆ, ಮಳೆ ಕೊರೆತೆಯು ಭತ್ತ ಬೆಳೆಯ ಮೇಲೆಯೂ ಪರಿಣಾಮ ಬೀರುವಂತೆ ಮಾಡಿದೆ.ಹಲವೆಡೆ ಭತ್ತ ನಾಟಿ ವಿಳಂಬವಾಗಿಸಿದೆ. ಮತ್ತೆ ಕೆಲವೆಡೆ ಕಡಿಮೆ ನೀರು ಬಯಸುವಬೆಳೆಗಳತ್ತ ರೈತರು ಚಿತ್ತ ಹರಿಸಲಾರಂಭಿಸಿದ್ದಾರೆ.ಹಲವು ಗ್ರಾಮಗಳಲ್ಲಿನ ಕೆರೆಕಟ್ಟೆಗಳ ನೀರಿನ ಸಂಗ್ರಹದಲ್ಲಿ, ತೀವ್ರ ಸ್ವರೂಪದ ಕೊರತೆಕಂಡುಬಂದಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ, ಮುಂದಿನ ದಿನಗಳಲ್ಲಿ ಜನ -ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಹಾಗೂ ಅಂತರ್ಜಲ ಮಟ್ಟ ಕುಸಿಯುವ ಆತಂಕವಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ 7 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಬೇಕೆಂಬಆಗ್ರಹ ಅನ್ನದಾತರ ವಲಯದಿಂದ ಕೇಳಿಬರಲಾರಂಭಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲತಾಲೂಕುಗಳಲ್ಲಿ ಪ್ರತಿಭಟನೆ ಕೂಡ ಆರಂಭವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವಕ್ರಮಕೈಗೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.