ಮಲಹೊರುವ ಪದ್ಧತಿ ವಿರುದ್ಧ ಬೀದಿ ನಾಟಕ

ಹಗರಿಬೊಮ್ಮನಹಳ್ಳಿ.ಏ.೧೬ ಭಾರತ ಸರ್ಕಾರ ಜಾರಿಗೆ ತಂದಿರುವ ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಅಮಾನವೀಯ ಪದ್ಧತಿ ಮಾಡುವುದನ್ನು ತಡೆಯುವುದು ಮತ್ತು ಆ ಕುಟುಂಬಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವ ಉದ್ದೇಶ ನಮ್ಮದಾಗಿರಲಿ ಎಂದು ತಹಶೀಲ್ದಾರ್ ಶರಣಮ್ಮ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಬಳಿ ಜಿಲ್ಲಾಡಳಿತ ಮತ್ತು ಪುರಸಭೆ ಸಮಾನತೆ ಯೂನಿಯನ್ ಕರ್ನಾಟಕ ಗುರುವಾರ ಏರ್ಪಡಿಸಿದ್ದ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯರಿಂದ ಮಲ ಹೊರಿಸುವುದು ಮತ್ತು ಸ್ವಚ್ಛಗೊಳಿಸುವುದು ಅಪರಾಧ ಅಂತವರು ಕಂಡುಬಂದರೆ ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದರು.
ಪುರಸಭೆಯ ವ್ಯವಸ್ಥಾಪಕ ಚಂದ್ರಶೇಖರ್, ನೈರ್ಮಲ್ಯ ಅಧಿಕಾರಿ, ಪ್ರಭಾಕರ ಪುರಸಭೆಯ ಸಿಬ್ಬಂದಿಗಳಾದ ನಾಗರತ್ನ, ಜಯಲಕ್ಷ್ಮಿ, ಎಂ. ಬಸವರಾಜ್ ಹನುಮಂತರಾಯ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ನಾಟಕ ಮೂಲಕ ಜನಜಾಗೃತಿ ಮೂಡಿಸಿದ ಮಲಗುಂಡಿ ನಾಟಕ ಜನರಲ್ಲಿ ಮೆಚ್ಚುಗೆ ಪಡೆದುಕೊಂಡಿತು