ಮಲಹೊರುವ ಪದ್ಧತಿ ವಿರುದ್ಧ ಕೊಟ್ಟೂರಿನಲ್ಲಿಬೀದಿ ನಾಟಕ

ಕೊಟ್ಟೂರು ಏ 17 : ಭಾರತ ಸರ್ಕಾರ ಜಾರಿಗೆ ತಂದಿರುವ ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಅಮಾನವೀಯ ಪದ್ಧತಿ ಮಾಡುವುದನ್ನು ತಡೆಯುವುದು ಮತ್ತು ಆ ಕುಟುಂಬಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವ ಉದ್ದೇಶ ನಮ್ಮದಾಗಿರಲಿ ಎಂದು ತಹಶೀಲ್ದಾರ್ ಜಿ.ಅನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಟ್ಟಣಪಂಚಾಯಿತಿ,ಜಿಲ್ಲಾಡಳಿತ ಸಮಾನತೆ ಯೂನಿಯನ್ ಕರ್ನಾಟಕ ಶುಕ್ರವಾರ ಏರ್ಪಡಿಸಿದ್ದ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯರಿಂದ ಮಲ ಹೊರಿಸುವುದು ಮತ್ತು ಸ್ವಚ್ಛಗೊಳಿಸುವುದು ಅಪರಾಧ ಅಂತವರು ಕಂಡುಬಂದರೆ ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದರು. ಮುಖ್ಯಾಧಿಕಾರಿ ಟಿಎಸ್.ಗಿರೀಶ್, ಸ್ಯಾನಿಟರಿ ಇನ್ಸ್ಪೆಕ್ಟರ್ ಅನುಷಾ, ಸೇರಿದಂತೆ ಅನೇಕರು ಇದ್ದರ