ಮಲಯಬಾದ್:ಸ್ಯಾನಿಟೇಜೇಷನ್ ಸಿಂಪಡನೆ


ರಾಯಚೂರು.ಜು.೧.ಕೋವಿಡ್ ಎರಡನೇ ಅಲೆ ಹೆಚ್ಚುತ್ತಿದ್ದು ಅದರಿಂದ ತಾಲೂಕಿನ ಮಲಯಬಾದ್ ಗ್ರಾಮದಲ್ಲಿ ಸ್ಯಾನಿಟೇಜೇಷನ್ ಸಿಂಪಡನೆ ಮಾಡಲಾಯಿತು.ತಾಲೂಕಿನ ಮಲಯಬಾದ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡಿನಲ್ಲಿ ಸ್ಯಾನಿಟೇಜೇಷನ್ ಸಿಂಪಡಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಖಾಜಾ ಹುಸೇನ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಮ್ಮ ಹುಶೇನಪ್ಪ,ಮಹಾದೇವ ಯಾದವ್, ಈರೇಶ್ ನಾಯಕ್, ಶಾರದಾ ಕೆ ಹನುಮೇಶ್, ಶಂಕ್ರಮ್ಮ ಹನುಮಂತ, ಬುಜ್ಜಮ್ಮ ಜಂಬಣ್ಣ, ಮಾಜಿ ಸದಸ್ಯರಾದ ಹನುಮೇಶ್, ಪಿ ಗೋವಿಂದು, ಕೃಷ್ಣಮೂರ್ತಿ, ಈರೇಶ್ ಊಟ್ಕುರು, ರಾಘವೇಂದ್ರ ನಾಯಕ್ , ತಿಮ್ಮಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.