ಮಲಬಾರ್ ಮೊದಲ ಹಂತದ ಸಮರಾಭ್ಯಾಸಕ್ಕೆ ಚಾಲನೆ

ನವದೆಹಲಿ , ನ ೩-ಬಂಗಾಕೊಲ್ಲಿಯಲ್ಲಿ ನೌಕಾ ವ್ಯಾಯಾಮದ ಮೊದಲ ಹಂತದ ಮಲಬಾರ್ ಸಮರಾಭ್ಯಾಸ ಇಂದಿನಿಂದ ಆರಂಭವಾಗಿದೆ.ಮೂರು ದಿನಗಳ ಕಾಲ ಚತುರ್ಭುಜ ನೌಕಾ ವ್ಯಾಯಾಮ ನಡೆಯಲಿದೆ.
ಭಾರತ ಮತ್ತು ಚೀನಾ ನಡುವಣ ಗಡಿ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಈ ಸಮರಾಭ್ಯಾಸ ನಡೆಸುವ ಮೂಲಕ ಚೀನಾದ ಆಕ್ರಮಣಕಾರಿ ಧೋರಣೆಗೆ ತಿರುಗೇಟು ನೀಡಲು ಭಾರತ ಮುಂದಾಗಿದೆ.
ಭಾರತ, ಅಮೆರಿಕ,ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಬಂಗಾಳಕೊಲ್ಲಿಯಲ್ಲಿ ಮೊದಲ ದಿನದ ಸಮರಾಭ್ಯಾಸ ನಡೆಸಿತು. ಈ ನಾಲ್ಕು ದೇಶಗಳ ನೌಕಾಪಡೆಗಳ ನಡುವೆ ಉನ್ನತ ಮಟ್ಟದ ಸಿನರ್ಜಿ ಮತ್ತು ಸಮನ್ವಯ ಸಾಧಿಸಲು ಈ ಸಮರಾಭ್ಯಾಸ ಅನುಕೂಲವಾಗಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇಂಡೋ-ಫೆಸಿಫಿಕ್ ಪ್ರದೇಶವನ್ನು ಬೆಂಬಲಿಸುವ ದೇಶಗಳ ಬದ್ಧತೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಈ ಸಮರಾಭ್ಯಾಸ ಚೀನಾದ ಸೇನಾ ಆಕ್ರಮಣಕಾರಿ ಧೋರಣೆ ಹೆಚ್ಚಿಸುತ್ತಿರುವ ಪ್ರದೇಶದಲ್ಲಿ ಈ ದೇಶಗಳ ಸಹಕಾರ ಪಡೆಯಲು ಭಾರತಕ್ಕೆ ಅನುಕೂಲವಾಗಲಿದೆ.
ಮಲಬಾರ್ ಸಮರಾಭ್ಯಾಸದ ಮೊದಲನೇ ಹಂತದಲ್ಲಿ ಮೇಲ್ಮೆ,ಜಲಾಂತರ್ಗಾಮಿ ಮತ್ತು ವಾಯು ವಿರೋಧಿ ಕಾರ್ಯಾಚರಣಗಳನ್ನು ಒಳಗೊಂಡ ಸಂಕೀರ್ಣಮತ್ತು ಸುಧಾರಿತ ನೌಕಾ ಸಮರಾಭ್ಯಾಸ ಒಳಗೊಂಡಿದೆ.
ಸಂಪರ್ಕವಿಲ್ಲದ ಸಮುದ್ರದಲ್ಲಿ ಮಾತ್ರ, ಸಮರಾಭ್ಯಾಸ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೊದಲ ಹಂತದಲ್ಲಿ ಭಾರತದ ಪರ ಅಡ್ಮಿರಲ್ ಸಂಜಯ್ ವಾತ್ಸಾಯನ್ ನೇತೃತ್ವ ವಹಿಸಿದ್ದಾರೆ. ಐಎನ್‌ಎಸ್ ರಣವಿಜಯ್, ಐಎನ್‌ಎಸ್ ಶಿವಾಲಿಕ್, ಐಎನ್‌ಎಸ್ ಸುಕನ್ಯಾ ಯದ್ದ ಟ್ಯಾಂಕರ್ ಹಾಗೂ ಐಎನ್‌ಎಸ್ ಸಿಂಧುರಾಜ್ ನೌಕೆಯನ್ನು ನಿಯೋಜಿಸಲಾಗಿದೆ.