ಮಲಬದ್ದತೆ ನಿವಾರಣೆ ಟಿಪ್ಸ್

ಮಲಬದ್ದತೆ ನಿವಾರಿಸಲು ದೇಹದಲ್ಲಿ ಹೈಡ್ರೇಶನ್ ಮತ್ತು ಲುಬ್ರಿಕೇಶನ್ ಹೆಚ್ಚಿಸಬೇಕು ಎಂದು ಆಯುರ್ವೇದ ಸಲಹೆ ನೀಡುತ್ತದೆ. ಸಂಪೂರ್ಣ ಫೈಬರ್ ಯುಕ್ತ ಆಹಾರ ಪದಾರ್ಥ ತಿನ್ನಿ. ಅನ್ನ ಗೋಧಿ, ರಾಗಿ, ಹೆಸರುಬೇಳೆ, ಮೂಸಂಬಿ, ಹಿಂಗ್, ಬೆಳ್ಳುಳ್ಳಿ ಹಸಿರು ತರ್ಕಾರಿ, ಸೊಪ್ಪು ಇತ್ಯಾದಿ ಯಥೇಚ್ಛವಾಗಿ ತಿನ್ನಿ. ಮಲಬದ್ದತೆ ನಿವಾರಣೆಯಾಗುತ್ತದೆ.
ದಿನಕ್ಕೆ ಕನಿಷ್ಟ 2-3 ಲೀಟರ್ ನೀರು ಕುಡಿಯಿರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಇನ್ನೂ ಉತ್ತಮ. ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದ ಬೆಳಗ್ಗೆ ಹೊಟ್ಟೆ ಫಟಾಫಟ್ ಕ್ಲಿಯರ್ ಆಗುತ್ತದೆ.
ತುಪ್ಪ, ಆಲಿವ್ ಆಯಿಲ್, ಶೇಂಗಾ ಎಣ್ಣೆ, ತೆಂಗಿನ ಎಣ್ಣೆ ಬಳಸಿ ಮಾಡಿದ ಪದಾರ್ಥಗಳನ್ನೇ ಭೋಜನ ವೇಳೆ ತಿನ್ನಿ. ಇವು ಹೊಟ್ಟೆಯಲ್ಲಿ ಲ್ಯೂಬ್ರಿಕೇಶನ್ ಅಂಶ ಹೆಚ್ಚು ಮಾಡಿ, ದೇಹ ಭಾರ ಕಡಿಮೆ ಮಾಡಲು ನೆರವಾಗುತ್ತವೆ. ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿದರೆ ಇನ್ನೂ ಒಳ್ಳೆಯದು.
ಅನಾನಸ್ ಜ್ಯೂಸ್ ಕುಡಿಯಿರಿ. ಇದರಿಂದ ದೇಹದ ವಾತ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಮಲಬದ್ದತೆ ಕೂಡಾ ನಿವಾರಣೆಯಾಗುತ್ತದೆ.
ಅಧಿಕ ಟೀ ಕಾಫಿ ಕುಡಿಯಬೇಡಿ. ಸ್ಮೋಕಿಂಗ್ ಕಡಿಮೆ ಮಾಡಿ. ಬೇಕಾಬಿಟ್ಟಿ ಟ್ಯಾಬ್ಲೆಟ್ ತಿನ್ನುವುದನ್ನು ಕಡಿಮೆ ಮಾಡಿ.
ಹೊಂದಿಕೆಯಾಗದ ಆಹಾರವನ್ನು ಯಾವತ್ತಿಗೂ ತಿನ್ನಬಾರದು. ಉದಾಹರಣೆಗೆ ಹಾಲಿನ ಜೊತೆ ನಮ್ಕೀನ್, ಬಿಸಿ ಮತ್ತು ತಂಪು ವಸ್ತುಗಳನ್ನು ಒಟ್ಟಿಗೆ ತಿನ್ನುವುದು ಇತ್ಯಾದಿ ಮಾಡಬಾರದು.