ಮಲಪ್ರಭಾ ಕಾಲುವೆ ನೀರು ಬಿಡುಗಡೆ

(ಸಂಜೆವಾಣಿ ವಾರ್ತೆ)
ನವಲಗುಂದ,ಸೆ23 : ಸವದತ್ತಿ ರೇಣುಕಾ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿ ಮಲಪ್ರಭಾ ಡ್ಯಾಂ ನಿಂದ ಕಾಲುವೆಗೆ ಕುಡಿಯಲು ನೀರು ಬಿಡಲಾಗಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹಾಗೂ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ ಅವರ ಅಧ್ಯಕ್ಷತೆಯಲ್ಲಿ ಮಲಪ್ರಭಾ ನೀರು ಬಳಕೆದಾರರ ಸಂಘದ ಐಸಿಸಿ ಸಭೆಯಲ್ಲಿ ನಿರ್ಣಯಿಸಿದಂತೆ ರೇಣುಕಾ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿ ಬೇಗನೆ ಮಳೆಯಾಗಲಿ ಎಂದು ದೇವಿಗೆ ಬೇಡಿಕೊಂಡು ನೀರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಲ್ಪಭಾ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಸದುಗೌಡ ಪಾಟೀಲ, ನಿರ್ದೇಶಕರಾದ ಮಾಂತೇಶ ನಡನಹಳ್ಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿ.ಕೆ. ದುಮ್ಮಾಳೆ, ಅಧೀಕ್ಷಕ ಇಂಜನೀಯರಾದ ಮಲ್ಲಿಗವಾಡ, ಡಿ.ವಾಯ್.ಎಸ್.ಪಿ ರಾಮನಗೌಡ ಹಟ್ಟಿ, ಕಾರ್ಯನಿರ್ವಾಹಕ ಇಂಜನೀಯರ ಮುಳ್ಳೂರ, ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ, ಮುಶೇಖಾನ, ಅನೇಕ ನೀರಾವರಿ ಇಲಾಖೆಯ ಅಧಿಕಾರಿಗಳು, ರೈತಮುಖಂರಡರುಗಳು ಉಪಸ್ಥಿತರಿದ್ದರು.