ಮಲದಕಲ್ ಗೆಳೆಯರ ಬಳಗದ ಶೈಕ್ಷಣಿಕ ಕಾರ್ಯ ಶ್ಲಾಘನೀಯ

ರಾಯಚೂರು.ನ.೧೫- ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಹಾಗೂ ವೀರ ವನಿತೆ ಒನಕೆ ಒಬವ್ವ ಜಯಂತಿಯ ಅಂಗವಾಗಿ ಮಲದಕಲ್ ಗೆಳೆಯರ ಬಳಗದ ಯುವಕರು ದೇವದುರ್ಗ ತಾಲೂಕಿನ ಗೋವಿಂದಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲೆಯ ಮುಖ್ಯ ಗುರುಗಳಾದ ಷಣ್ಮುಖ ಹೂಗಾರ್ ಮಾತನಾಡುತ್ತಾ, ಕಳೆದ ಮೂರು ವರ್ಷಗಳಿಂದ ಮಲದಕಲ್ ಗೆಳೆಯರ ಬಳಗವು ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಬಹಳ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಲದಕಲ್ ಗೆಳೆಯರ ಬಳಗದ ರಾಮಲಿಂಗ ನಾಯಕ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಆದರ್ಶ ಜೀವನವನ್ನು ನಡೆಸಬೇಕೆಂದು ಕರೆಕೊಟ್ಟರು. ಅಲ್ಲದೆ ವಿದ್ಯಾರ್ಥಿಗಳ ಏಳಿಗೆಗೆ ನಮ್ಮ ಬಳಗವು ಸದಾ ಕಾಲ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲದಕಲ್ ಗೆಳೆಯರ ಬಳಗದ ರವಿಕುಮಾರ್ ಬಾಡ್ಲಾ, ಗಂಗಣ್ಣ ಬೋವಿ, ಗಂಗಪ್ಪ ಅಧ್ಯಕ್ಷರು, ರಾಚಪ್ಪ ಬಾವಿಮನೆ,ಕಾಶಪ್ಪ ನಾಯಕ್, ಮಹಿಬೂಬ್ ಕುಲಕರ್ಣಿ,ನಾಗಪ್ಪ ಬಲ್ಲಿದ್,ರಮೇಶ್ ಮಡಿವಾಳ್ ಸದಸ್ಯರು ಎಸ್ ಡಿ ಎಂ ಸಿ, ಗ್ರಾ ಪಂ ಸದಸ್ಯರಾದ ಶಿವರಾಜ್ ಬಾಡದ್, ಶ್ರೀಮತಿ ನೀಲಮ್ಮ ಬಾವಿಮನೆ, ಮೈಲಾರಿ, ಕುರುಬ ಸಮಾಜದ ಮುಖಂಡರಾದ ಸಿದ್ದಯ್ಯ,ಮಲ್ಲಪ್ಪ, ನಾಯಕ್ ಸಮುದಾಯದ ಶಿವಮಾನ್ಯ,ಅಂಗನವಾಡಿ ಕಾರ್ಯಕರ್ತೆ ಜಂಭಮ್ಮ, ಆಶಾ ಲಕ್ಷ್ಮೀ ಕುಂಬಾರ್, ಸ.ಶಿ ದೇವೀರಮ್ಮ ಕೆ, ಅತಿಥಿ ಶಿಕ್ಷಕರು ಸೇರಿದಂತೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು.