ಮಲತ್ಯಾಜ್ಯ ಸಂಸ್ಕರಣ ಘಟಕ ವೀಕ್ಷಿಸಿದ ಜಿಪಂ ಸಿಇಒ

ಕಲಬುರಗಿ ಜು 27: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ತಾಲೂಕಿನ ತಾಜಸುಲ್ತಾನಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನಿರ್ಮಾಣ ಮಾಡಿರುವ ಮಲತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಘಟಕವು 15 ಕಿ.ಮಿ ವ್ಯಾಪ್ತಿಯಲ್ಲಿ ಬರುವ ಸುಮಾರು 13 ಗ್ರಾಮ
ಪಂಚಾಯತಿಗಳನ್ನೊಳಗೊಂಡು ಇಡೀ ರಾಜ್ಯದಲ್ಲಿಯೇ ಮಾದರಿ
ಘಟಕವಾಗಿ ನಿರ್ಮಾಣಗೊಂಡು ಮೊದಲನೆ ಘಟಕವೆಂದು
ಉದ್ಘಾಟನೆಗೊಂಡಿದೆ. ಈ ಘಟಕವು 6ಕೆಎಲ್‍ಡಬ್ಲ್ಯೂ ಸಾಮಥ್ರ್ಯ
ಹೊಂದಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಮನೆಗಳ
ಶೌಚಾಲಯಗಳ ಸೆಫ್ಟಿಕ್ ಟ್ಯಾಂಕ್‍ಗಳನ್ನು ಖಾಲಿ ಮಾಡಲು ಈ
ಘಟಕ ಅನುವು ಮಾಡಿಕೊಡುತ್ತದೆ. ಘಟಕದನಿರ್ಮಾಣದಿಂದ ಮಲ ಹೊರ ಪದ್ಧತಿಯನ್ನು ನಿರ್ಮೂಲನೆ ಮಾಡಿದಂತಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.ಭೇಟಿಯ ಸಂದರ್ಭದಲ್ಲಿ ಯೋಜನಾನಿರ್ದೇಶಕ ಜಗದೇವಪ್ಪ ,ಸಹಾಯಕ ನಿರ್ದೇಶಕ ರೇವಣಸಿದ್ದಪ್ಪಾ ಪಿಡಿಓ ಅನುಪಮಾ ಹಾಗೂ ಎಸ್‍ಎಲ್‍ಡಬ್ಲ್ಯುಎಮ್ ಇಂಜಿನಿಯರ್ ಭಾಗಪ್ಪ ಮೋದಿ ಹಾಗೂ ಇತರರು ಉಪಸ್ಥಿತರಿದ್ದರು.