ಮಲಗಿದ್ದ ಯುವತಿಯ ರುಂಡ ಕಡಿದು ತಲೆಯೊಂದಿಗೆ ಠಾಣೆಗೆ ಬಂದ ಪಾಗಲ್ ಪ್ರೇಮಿ.

ಕೂಡ್ಲಿಗಿ.ಜು.21 :- ಮೂರ್ನಾಕು ವರ್ಷದಿಂದ ಯುವತಿಯನ್ನು ಪ್ರೀತಿಸಿದ ಪ್ರಿಯಕರ ಇಬ್ಬರ ಮದುವೆಗೆ ಯುವತಿಯರ ಮನೆಯಲ್ಲಿ ಒಪ್ಪದಿದ್ದಕ್ಕೆ ಬೇರೊಂದು ಮದುವೆಯಾಗಿದ್ದಲ್ಲದೆ ನರ್ಸಿಂಗ್ ಮಾಡುತಿದ್ದ ಹಳೇ ಪ್ರೇಮಿ ಯುವತಿ ಊರಿಗೆ ಬಂದಿದ್ದು ಅವಳ ಮನೆಯಲ್ಲಿ ಯಾರು ಇಲ್ಲದ ಸಮಯ ಕಾದಿದ್ದ ಪಾಗಲ್ ಪ್ರೇಮಿ ಇಂದು ಮಚ್ಚಿನಿಂದ ಕೊಚ್ಚಿ ಮನೆಯಲ್ಲಿ ಮಲಗಿದ್ದ ಯುವತಿಯ ರುಂಡವನ್ನು ಚೆಂಡಾಡಿ ಆ ರುಂಡವನ್ನು ತೆಗೆದುಕೊಂಡು ಹೋಗಿ ಹೊಸಹಳ್ಳಿ ಪೊಲೀಸರಿಗೆ ಶರಣಾಗಿರುವ ಘಟನೆ ಇಂದು ಮಧ್ಯಾಹ್ನ ತಾಲೂಕಿನ ಕನ್ನಬೋರಯ್ಯನಹಟ್ಟಿಯಲ್ಲಿ ಜರುಗಿದೆ

ಕನ್ನಬೋರಯ್ಯನಹಟ್ಟಿ ಗ್ರಾಮದ ಭೋಜರಾಜ (26) ಯುವತಿ ನಿರ್ಮಲಾ (23) ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಲಿಯಾದ ದುರ್ದೈವಿ ಯುವತಿಯಾಗಿದ್ದು ಭೋಜರಾಜ (26) ಈಕೆಯ ರುಂಡ ಚೆಂಡಾಡಿದ ಪಾಗಲ್ ಪ್ರೇಮಿಯಾಗಿದ್ದಾನೆ ಹಾಗೂ ಮಚ್ಚಿನಿಂದ ಕೊಚ್ಚಿದ ಆಕೆಯ ರುಂಡವನ್ನೇ ಪೊಲೀಸ್ ಠಾಣೆಗೆ ತಂದು ಶರಣಾಗಿರುವ ಆರೋಪಿಯಾಗಿದ್ದಾನೆ.

ನಿರ್ಮಲಾ ಈಕೆಯು ಕೊಪ್ಪಳ ಜಿಲ್ಲೆಯಲ್ಲಿ ನರ್ಸಿಂಗ್ ಕೊನೆವರ್ಷದ ಕೋರ್ಸ್ ಮಾಡುತ್ತಿದ್ದು ಮೂರು ದಿನದ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದಳು ಮೂರು ವರ್ಷದ ಹಿಂದಿನಿಂದ ನಿರ್ಮಲಾಳನ್ನು ಪ್ರೀತಿಸುತ್ತಿದ್ದ ಬೋಜರಾಜ ಎಂಬುವಾತ ಯುವತಿಯ ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪಿಗೆ ಕೊಡಲಿಲ್ಲವೆಂದು ಹಾಗೂ ಮೂರು ತಿಂಗಳ ಹಿಂದಷ್ಟೇ ಸಂಬಂಧಿಕರಲ್ಲಿ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದ ಭೋಜರಾಜ್ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹಳೇ ಪ್ರೀತಿಯ ನೆನೆದು ನಿರ್ಮಲಾಳ ಮನೆ ಕಡೆಗೆ ಹೋಗಿದ್ದು ಅಲ್ಲದೆ ಮನೆಯಲ್ಲಿ ಯಾರು ಇರದ ಸಮಯ ಅರಿತ ಭೋಜರಾಜ್ ಮಚ್ಚನ್ನು ತೆಗೆದುಕೊಂಡು ಹೋಗಿ ಮಂಚದ ಮೇಲೆ ಮಲಗಿದ್ದವಳ ರುಂಡವನ್ನು ಕತ್ತರಿಸಿ ಚೆಂಡಾಡಿ ಆ ರುಂಡವನ್ನು ಬ್ಯಾಗಿನಲ್ಲಿಟ್ಟುಕೊಂಡು ಹೊಸಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಕೊಲೆ ಆರೋಪಿ ಭೋಜರಾಜ ಶರಣಾಗಿದ್ದನೆಂದು ತಿಳಿದಿದೆ.