ಮರ ಕಡಿದು ವಿದ್ಯುತ್ ಕಂಬ ಉರುಳಿಸಿದರು.

ಸಂಜೆವಾಣಿ ವಾರ್ತೆ
ಸಿರುಗುಪ್ಪ  ನ 11 : ವಿಜಯ ವಿಠಲ ನಗರದ ಕಿಡ್ಸ್ ಪ್ಯಾರಡೈಸ್ ಶಾಲೆ ಮುಂದಿನ ರಸ್ತೆಯ ಪಕ್ಕದ ನಿವಾಸದಲ್ಲಿರುವ ಕೌತಾಳ ಅಯ್ಯಪ್ಪ ಕುಟುಂಬಸ್ಥರು ತಮ್ಮ ಆವರಣದಲ್ಲಿ ಹೊಸ ಕಟ್ಟಡಕ್ಕೆ ಅಡಿಪಾಯ ಹಾಕಿ ನಿರ್ಮಾಣ ಮಾಡುವಾಗ ಮರವೊಂದು ಕಡಿದಾಗ ಮರವು ಉರುಳಿ ವಿದ್ಯುತ್ ಕಂಬಗಳ ಲೈನ್ ಮೇಲೆ ಬಿದ್ದ ಪರಿಣಾಮವಾಗಿ ನಾಲ್ಕ ವಿದ್ಯುತ್ ಕಂಬಗಳು ಬಿದ್ದಿದ್ದು ವಿದ್ಯುತ್ ಇರುವಾಗ ಅದೃಷ್ಟವಶಾತ್ ಅನೇಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆಯಿತು.
ಕೊಂಬೆಯನ್ನು ಕತ್ತರಿಸುವ ವೇಳೆಯಲ್ಲಿ ಗೊಂಬೆ ಮುರಿದು ಅವರ ಕಾಂಪೌಂಡ್ ಆವರಣ ಹಾಗೂ ರಸ್ತೆ ಪಕ್ಕದ ಜೀವಂತ ವಿದ್ಯುತ್ ವೈರಿಗಳ ಮೇಲೆ ಬಿದ್ದ ಕಾರಣ ಏಕಕಾಲಕ್ಕೆ 4ವಿದ್ಯುತ್ ಕಂಬಗಳು ಹಾಗೂ ಜೀವಂತ ವಿದ್ಯುತ್ ವೈರ್‍ಗಳು ನೆಲಕ್ಕೆ ಬಿದ್ದ ಕಾರಣ ಆ ರಸ್ತೆಯಲ್ಲಿ ಓಡಾಡುತ್ತಿದ್ದ ಅನೇಕರು ವಾಹನಗಳು ಮತ್ತು ವಾಹನ ಸವಾರರು ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಾಣಾಪಾಯದಿಂದ ಪಾರಾದ ಅನೇಕರು ಭಯಭೀತರಾಗಿ ಆವರಣದ ಒಳಗೆ ನಿಂತಿದ್ದ ಮಾಲೀಕರಲ್ಲಿ ಅವರ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದಾಗ ಮಾಲೀಕರು ರಸ್ತೆ ಪ್ರಯಾಣಿಕರೊಂದಿಗೆ ಮಾತಿನ ಜಟಾಪಟಿ ನಡೆಯಿತು.
ವಿಷಯ ತಿಳಿದ ಜೆಸ್ಕಾಂ ಇಲಾಖೆ ಅಧಿಕಾರಿಗಳು ಆಗಮಿಸಿ ವಿದ್ಯುತ್ ಪ್ರವಹಿಸಿ ಲೈನ್ ತೆಗೆದು ವಿದ್ಯುತ್ ಸೌಕರ್ಯ ಒದಗಿಸಿದರು.