ಮರ್ಲಾನಹಳ್ಳಿಯಲ್ಲಿ ಕಬಡ್ಡಿ ವೈಭವ ಚಾಲನೆ

ಕಾರಟಗಿ:ಏ:17: ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಹನುಮಾನ್ ಸ್ಪೋರ್ಟ್ ಕ್ಲಬ್ ಹಾಗೂ ಕರ್ನಾಟಕ ಮದಕರಿ ನಾಯಕ ಸೇನೆ ವತಿಯಿಂದ ಎರಡು ದಿನಗಳ ಮರ್ಲಾನಹಳ್ಳಿ ಕಬಡ್ಡಿ ವೈಭವ-2021 ರಾಜ್ಯ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಶನಿವಾರದಂದು ಚಾಲನೆ ನೀಡಲಾಯಿತು,
ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರದ ಬಯಲು ಜಾಗದಲ್ಲಿ ಮರ್ಲಾನಹಳ್ಳಿ ಕಬಡ್ಡಿ ವೈಭವವನ್ನು ಮಾಜಿ ಸಚಿವ ಶಿವರಾಜ್ ಎಸ್ ತಂಗಡಿಗಿ ಕ್ರೀಡಾಪಟಗಳೊಂದಿಗೆ ಕಬಡ್ಡಿ ಆಟ ಆಡುವ ಮೂಲಕ ಚಾಲನೆ ನೀಡಿದರು,
ನಂತರ ಮಾತನಾಡಿದ ಅವರು ಕ್ರೀಡಾಪಟುಗಳು ಮಾನಸಿಕವಾಗಿ ದೈಹಿಕವಾಗಿ ಹೊರಬರಲು ಕ್ರೀಡೆಯಲ್ಲಿ ಉತ್ಸಾಹವಾಗಿ ಪಾಲ್ಗೊಂಡು ಉತ್ತೇಜಿತರಾಗಿ ಮಾನಸಿಕವಾಗಿ ದೈಹಿಕವಾಗಿ ಹೊರ ಬರಲು ಸಾಧ್ಯವಿದೆ ಎಂದು ತಿಳಿಸಿದರು,
ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಆಟದಲ್ಲಿ ಭಾಗವಹಿಸುವುದು ಮುಖ್ಯವಾಗಿರುತ್ತದೆ ಇಂದಿನ ಯುವಕರು ಕ್ರೀಡೆಯಿಂದ ದೂರ ಉಳಿಯದೆ ಆಸಕ್ತಿ ವಹಿಸಿ ಕ್ರೀಡೆಯಲ್ಲಿ ಭಾಗವಹಿಸಲು ತಿಳಿಸಿದರು,
ನಂತರ ಗ್ರಾಮ ಪಂಚಾಯತ್ ಅಧ್ಯಕ್ಷ ರವಿನಂದನ ಮಾತನಾಡಿ ನಮ್ಮ ಗ್ರಾಮದಲ್ಲಿ ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಾರಾಷ್ಟ್ರ. ತಮಿಳುನಾಡು. ಬೆಂಗಳೂರು. ತುಮಕೂರು. ಹರಿಹರ ದಾವಣಗೆರೆ. ಉಜಿರೆ ತಂಡಗಳು ಭಾಗವಹಿಸುತ್ತಿದ್ದರಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಉತ್ಸಹ ಬಂದಂತಾಗಿದೆ ಕ್ರೀಡಾಪಟುಗಳು ಸೌಹಾರ್ದತೆಯಿಂದ ಪಾಲ್ಗೊಂಡು ಮರ್ಲಾನಹಳ್ಳಿ ಕಬಡ್ಡಿ ವೈಭವ ವನ್ನು ಯಶಸ್ವಿಗೊಳಿಸಬೇಕೆಂದು ಎಂದು ಕೋರಿದರು,
ನಂತರ ಪ್ರದರ್ಶನ (ಶೋ ಮ್ಯಾಚ್) ಪಂದ್ಯದಲ್ಲಿ ಹುನಗುಂದ ಮರ್ಲಾನಹಳ್ಳಿ. ಹೊಸ ಜೂರಟಗಿ ಯರಡೋಣ ತಂಡಗಳು ಪ್ರದರ್ಶನ ನೀಡಿದರು,
ನೆಕ್ಕಂಟಿ ನಾಗರಾಜ್, ಅಮರೇಶ್ ಜಿ ಕೆಎಸ್ಎಎಸ್ ಹಿರಿಯ ಉಪ ನಿರ್ದೇಶಕರು ಆರ್ಥಿಕ ಇಲಾಖೆ ವಿಧಾನಸೌಧ ಬೆಂಗಳೂರು, ಯಲ್ಲಮ್ಮ ಯಮನಪ್ಪ ಬೆಳಗಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಹಾಗೂ ಇನ್ನಿತರ ದಾನಿಗಳು ಕಬಡ್ಡಿ ವೈಭವಕ್ಕೆ ಪ್ರೋತ್ಸಾಹ ನೀಡಿದ್ದಾರೆ, ಇದೆ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು,
ಪಂಪಣ್ಣ ಜೋಗಲದಿನ್ನೆ, ಡಿ.ಹನುಮಂತಪ್ಪ.
ಯಮನೂರ.ಜೆ ಮಂಜುನಾಥ್. ಪರಮಿ ರಾಘವೇಂದ್ರ. ಜೆ.ವೆಂಕಟೇಶ್.ನಾಗಪ್ಪ ದೇವಲಾಪುರು. ಗುಂಡಪ್ಪ ಕಾರಟಗಿ. ಹನುಮಂತಪ್ಪ ಜೆ. ಯಂಕೋಬ ಸಿದ್ದಾಪುರ ಇನ್ನಿತರ ಇದ್ದರು,