ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರ ಯದಾ ಯದಾ ಹಿ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಯುವ ತಾರಾಜೋಡಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಮೇಲೂ ಒಟ್ಟಾಗಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದ್ದು, ಒಂದಷ್ಟು ಕುತೂಹಲ ಹುಟ್ಟುಹಾಕಿದೆ. ಅಲ್ಲದೆ ಹರಿಪ್ರಿಯಾ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ಲದೆ ಇಡೀ ಚಿತ್ರಕಥೆ ನಿಂತಿರುವುದೆ ಅವರ ಪಾತ್ರದ ಮೇಲೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ. ಈ ಕಾರಣಕ್ಕಾಗಿಯೇ ಯದಾ ಯದಾ ಹಿ ಕುತೂಹಲ ಕೆರಳಿಸಿದೆ.
ಜಾಕ್ ಮಂಜು ಚಿತ್ರ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದು ನಾಳೆ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ. ವಿಶೇಷವಾಗಿ ಈ ಚಿತ್ರದ ಟೈಟಲ್ ಹಾಡನ್ನು ವಸಿಷ್ಠಸಿಂಹ ಹಾಗೂ ಹರಿಪ್ರಿಯ ಹಾಡಿದ್ದಾರೆ.
ತೆಲುಗು ಮೂಲದ ಅಶೋಕ ತೇಜ ಈ ಚಿತ್ರ ನಿರ್ದೇಶಿಸಿದ್ದು, ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್ ನ ರಾಜೇಶ್ ಅಗರವಾಲ್ ಅವರು ನಿರ್ಮಿಸಿದ್ದಾರೆ.
ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಮತ್ತು ನಟ ದಿಗಂತ್ ಸುತ್ತ ಚಿತ್ರದ ಕಥೆ ಸಾಗಲಿದೆ. ಚಿತ್ರದಲ್ಲಿ ಹೇಳಿ ಕೇಳಿ ಮರ್ಡರ್ ಮಿಸ್ಟ್ರಿಯ ಕಥೆ ಒಳಗೊಂಡಿದ್ದು ಯಾರು ಕೊಲೆ ಮಾಡಿದ್ದಾರೆ ಎನ್ನುವುದು ಕುತೂಲಕಾರಿ ಸಂಗತಿ. ಒಂದಷ್ಟು ವಿಶೇಷತೆಗಳನ್ನು ಬಗಲಲ್ಲಿಟ್ಟುಕೊಂಡಿರುವ ಯದಾ ಯದಾ ಹಿ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದೆ.