ಮರೆಯಾಗುತ್ತಿರುವ ಸಂಸ್ಕಾರ-ಸಂಸ್ಕೃತಿ-ಕಳವಳ

ವಿಜಯಪುರ.ನ೨೩:ಪಾದಯಾತ್ರೆಯಿಂದ ನಮ್ಮಿಂದ ಮರೆಯಾಗುತ್ತಿರುವ ನಮ್ಮ ಸಂಸ್ಕಾರ-ಸಂಸ್ಕೃತಿಗಳು, ಹಳೆಯ ಪದ್ದತಿಗಳು ಹಿಂದಿನ ಪೀಳಿಗೆಗೆ ಗುರುತಿಸಲು ಸಾಧ್ಯವಾಗುತ್ತದೆ ಎಂದು ಪುರಸಭಾ ಮಾಜಿ ಸದಸ್ಯ ಜೆ.ಎಂ.ಚಂದ್ರು ತಿಳಿಸಿದರು.
ಪಟ್ಟಣದ ಗುರಪ್ಪ ಮಠದ ಶ್ರೀ ಓಂಕಾರೇಶ್ವರಸ್ವಾಮಿ ಸನ್ನಿಧಿಯಿಂದ ಶ್ರೀ ಓಂಕಾರೇಶ್ವರಸ್ವಾಮಿ ಪಾದಯಾತ್ರಾ ಭಕ್ತಾದಿಗಳ ಬಳಗದವತಿಯಿಂದ ೬ನೇ ವರ್ಷದ ಕಾರ್ತಿಕ ಮಾಸದ ಅಂಗವಾಗಿ ಶ್ರೀ ಭೋಗ ನಂದೀಶ್ವರ ಸ್ವಾಮೀಯ ನಂದಿ ಕ್ಷೇತ್ರದ ಪಾದಯತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕಳೆದ ೬ ವರ್ಷಗಳಿಂದ ವಿಜಯಪುರ ಮೂಲಕ ಚಿಕ್ಕನಹಳ್ಳಿ, ನಾರಾಯಣಪುರ, ನಂದಿ ಕ್ರಾಸ್‌ನಿಂದ ಪಾದಯಾತ್ರೆ ಮಾಡುವ ಎಲ್ಲರಿಗೂ ಸ್ಥಳೀಯ ಸಂಘ-ಸಂಸ್ಥೆಗಳು ಎಲ್ಲಾ ಸಹಕಾರಗಳನ್ನು ನೀಡುತ್ತಾ ನಾವು ಬರುತ್ತಿದ್ದು. ಯಾತ್ರೆಗೆ ಅರ್ಥವೇ ಪಾದದ ಮೂಲಕ ದೇವರ ದರ್ಶನಕ್ಕೆ ಹೋಗುವುದು. ಇದರಿಂದ ಆರೋಗ್ಯ ಚೆನ್ನಾಗಿರುವ ಜೊತೆಗೆ ಕೆಟ್ಟ ಚಟಗಳನ್ನೂ ಬಿಡುತ್ತಾರೆ. ದೇವರ ದರ್ಶನದಲ್ಲಿ ಸಾರ್ಥಕತೆಯೂ ಸಿಗುತ್ತದೆ ಎಂದರು.
ಮಾಜಿ ಹಾಲೂ ಉತ್ಪಾಧಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು ಮಾತನಾಡಿ, ಇಡೀ ವಿಶ್ಪಕ್ಕೆ ಮಾದರಿಯಾಗಿರುವ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಭಕ್ತ ಶಾಮಣ್ಣ ಮಾತನಾಡಿ, ಯುವಕರಿಗೆ ಸಂಸ್ಕಾರ ನೀಡಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿದೆ. ಭಾರತೀಯ ಸಂಸ್ಕೃತಿಯಲ್ಲಿ ಜನ್ಮ ನೀಡಿದ ತಾಯಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಧಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದರು. ಬಂದಂತಹ ಭಕ್ತರಿಗೆ ಗೊಡ್ಲುಮುದ್ದೇನಹಳ್ಳಿ ಗ್ರಾಮದ ನಂಜೇಗೌಡರು ಬಳಗದಿಂದ ಉಪಹಾರ ಸೇವೆ ಮಾಡಲಾಗಿತು.
ಈ ಸಂದರ್ಭದಲ್ಲಿ ಭಕ್ತಧಿಗಳಾದ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್, ಅರುಣ್, ಸುರೇಶ್, ಸುರೇಶ್, ವರದರಾಜು ಹಾಗೂ ಸುತ್ತಮುತ್ತಲ್ಲಿನ ಗ್ರಾಮಸ್ಥರು ಹಾಜರಿದ್ದರು.