ಮರೆಮ್ಮಾದೇವಿ ಜಾತ್ರೆ: ಗಂಗೆ ಸ್ಥಳಕ್ಕೆ ಪಲ್ಲಕ್ಕಿ ಮೆರವಣಿಗೆ

ಯಾದಗಿರಿ:ಮಾ.23: ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಮರೆಮ್ಮ ದೇವಿಯ ಜಾತ್ರೆಯ ಪ್ರಯುಕ್ತ, ಸೋಮವಾರ ಸಾಯಂಕಾಲ ಗಂಗೆ ಸ್ಥಳಕ್ಕೆ ತೆರಳಿ ಭೀಮಾ ನದಿಯಿಂದ ಚಾಮನಳ್ಳಿ ಗ್ರಾಮಕ್ಕೆ ವಾಪಸಾದರು. ಊರಿನ ನಾಗರಿಕರೊಂದಿಗೆ ಮತ್ತು ಎಲ್ಲಾ ಹೆಣ್ಣುಮಕ್ಕಳು ಕಳಸ ಕನ್ನುಡಿಯನ್ನು ಹಿಡಿದು ಪಲ್ಲಕ್ಕಿ ಜೊತೆಗೆ ತೆರಳಿದರು.
ಮೆರವಣಿಗೆಯಲ್ಲಿ ಗ್ರಾಮಸ್ಥರಾದ ಬಸ್ಸುಗೌಡ ಸಿ.ಪೆÇೀ.ಪಾಟೀಲ್, ತಾಲೂಕು ಪಂಚಾಯತ್ ಸದಸ್ಯರಾದ ಹಣಮಂತ. ಸಿ, ಚಾಮನಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಯಂಕಪ್ಪ ಎಚ್. ನೀಡಿಗಿ, ಗ್ರಾ ಪಂ ಸದಸ್ಯರಾದ ಬಸ್ಸಪ್ಪ.ಎಸ್ .ಕೋಳೇರ್, ಶ್ರೀಶೈಲ ಬಡಿಗೇರ, ಶರಣಪ್ಪ ಸಿ ದಂಡಗುಂಡ, ಮಹಾದೇವಪ್ಪ ಪಿ.ಬಡಿಗೇರ್, ಈಶಪ್ಪ ಎಸ್.ತುಮಕೂರ್, ಶಿವಶರಣಪ್ಪ ಎನ್ ಬಡಿಗೇರ್, ಮರೆಪ್ಪ ಗೌಂಡಿ, ಶಿವಪ್ಪ ಪಿ ಭಾಗಿಯಾದರು.