ಮರೆನಡುಪಾಳ್ಯದಲ್ಲಿ ನಕ್ಷತ್ರ ಸಂಘ ರಚನೆ

ಹುಳಿಯಾರು, ಜು. ೧೭- ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರೆನಾಡು ಪಾಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಕ್ಷತ್ರ ಹೊಸ ಸಂಘ ಉದ್ಘಾಟಿಸಲಾಯಿತು.
ಸಭೆಯಲ್ಲಿ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ಸಂಘದ ದಾಖಲಾತಿಗಳನ್ನು ನೀಡಿ, ಶ್ರೀ ಕ್ಷೇತ್ರದ ಬಗ್ಗೆ ಹಾಗು ಸಂಘ ಮಾಡುವುದರಿಂದ ಸದಸ್ಯರಿಗೆ ದೊರೆಯುವ ಸೌಲಭ್ಯಗಳಾದ ಪ್ರಗತಿನಿಧಿ, ಆರೋಗ್ಯ ರಕ್ಷಾ, ಮಾಶಾಸನ, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಾದ ಡೈರಿ ಅನುದಾನ, ಕೃಷಿ ಅನುದಾನ, ದೇವಸ್ಥಾನಗಳ ಅಭಿವೃದ್ಧಿ ಅನುದಾನ, ಹಿಂದೂ ರುದ್ರಗಳ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರೇಮಾನಂದ್, ವಲಯ ಮೇಲ್ವಿಚಾರಕ ನರಸಿಂಹರಾಜು, ಸೇವಾ ಪ್ರತಿನಿಧಿಗಳಾದ ಕರಿಯಣ್ಣ, ರೇಣುಕಾ ಮತ್ತಿತರರು ಭಾಗವಹಿಸಿದ್ದರು.