ಮರೂರು ಆಂಜನೇಯಸ್ವಾಮಿಯ
ಹನುಮ ಮಾಲೆ ದೀಕ್ಷಾ ಧಾರಣೆ ಆರಂಭ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.01:  ತಾಲೂಕಿನ ಮೋಕಾ ಗ್ರಾಮದ  ‘ಶ್ರೀ ಮರೂರು ಅಭಯ ಆಂಜನೇಯ ಸ್ವಾಮಿಯ 7 ನೇ ವರ್ಷದ ಹನುಮ ಮಾಲೆ ದೀಕ್ಷಾ ಧಾರಣೆ  ಮೊನ್ನೆಯಿಂದ ಆರಂಭ ಮಾಡಿದೆ.‌ ಅ. 20 ರಂದು ಹನುಮ ಮಾಲೆ ವ್ರತದ ಅಂತಿ ಮ‌ದಿನದ ಕಾರ್ಯಗಳು   ನಡೆಯಲಿವೆ ಎಂದು ಮಾಲೆಯ ಸ್ವಾಗತ ಸಮಿತಿ‌ಯ ಅನಿಲ್ ಕುಮಾರ್ ನಾಯ್ಡು ಮೋಕ ತಿಳಿಸಿದ್ದಾರೆ.
ಏಳನೇ ವರ್ಷದ ಹನುಮ ಮಾಲಾ ದೀಕ್ಷಾ ಧಾರಣ ಹಾಗೂ ಮತ್ತು ಎರಡನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಸದ್ಭಕ್ತರು ಮಾಡಿಕೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸ್ವಾಗತ ಸಮಿತಿ  ಸಾರ್ವಜನಿಕರನ್ನು ವಿನಂತಿಸಿಕೊಂಡಿದೆ.
ಆ 5,7,9,11,16 ಮತ್ತು 21 ದಿನಗಳ ವರೆಗೆ ಮಾಲೆ ಧರಿಸಲು ನಿಶ್ಚಯಿಸಲಾಗಿದೆ.
ಮಾಲಾಧಾರಿಗಳಾಗುವವರು ಕಾಯಾ ವಾಚಾ ಮನಸಾ ಶುದ್ಧರಾಗಿ ಪಾಲ್ಗೊಳ್ಳುವಂತೆ ಸೂಚಿಸಿದೆ. ಆ 19 ಶುಕ್ರವಾರ  ಸಂಜೆ ಇರುಮುಡಿ ಸಮರ್ಪಣೆ ಮತ್ತು ಆ20 ಶನಿವಾರದಂದು ಹೋಮ ಮತ್ತು ಪೂರ್ಣಾಹುತಿ ನಡೆಯುತ್ತದೆ.  ಅಂದು  ಬೆಳಿಗ್ಗೆ 11 ನೂತನ ಜೋಡಿಗಳ ಉಚಿತ ಸಾಮೂಹಿಕ ವಿವಾಹ
ಕಾರ್ಯಕ್ರಮ ಹಮ್ಮಿಕೊಂಡಿದೆ.
ಆ 12 ಶುಕ್ರವಾರ ಸಂಜೆ ಬಳ್ಳಾರಿ ನಗರದಲ್ಲಿ ಬೈಕ್‌ ರಾಲಿಯನ್ನು ನಡೆಸಲಾಗುವುದು ಮತ್ತು ಬೈಕ್ ರಾಲಿಯು ನಗರ ದೇವತೆ  ದುರ್ಗಮ್ಮ ದೇವಸ್ಥಾನದಿಂದ ಪ್ರಾರಂಭವಾಗಲಿದೆ. ಹನುಮ ಮಾಲಾ ಧೀಕ್ಷೆ, ಬೈಕ್‌ ರಾಲಿ ಮತ್ತು ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ 9741111122, 7676907172, 9632059744,8660867986 8310062526,9538757545
 ಈ ಮೊಬೈಲ್ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಿದೆ.