ಮರು ಮೌಲ್ಯಮಾಪನದಲ್ಲಿ 13 ಅಂಕಗಳಿಕೆ

ತಾಳಿಕೋಟೆ:ಜೂ.8: ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ತನಗೆ ಅಂಕ ಕಡಿಮೆ ಬಂದಿವೆ ಮರು ಮೌಲ್ಯಮಾಪನ ಮಾಡಬೇಕೆಂದು ಪಟ್ಟಣದ ವಿಕಾಸ್ ಪಬ್ಲಿಕ್ ಸ್ಕೂಲ್‍ನ ವಿಧ್ಯಾರ್ಥಿನಿ ಶ್ರೇಯಾ ಶಿವಕುಮಾರ ಗಬ್ಬೂರ ಮರು ಮೌಲ್ಯಮಾಪನಕ್ಕೆ ಸಲ್ಲಿಸಿದ ಅರ್ಜಿಯ ಪರಿಣಾಮ 13 ಅಂಕಗಳ ಗಳಿಕೆಯ ಜೊತೆಗೆ ಶಾಲೆಗೆ ತೃತೀಯ ಸ್ಥಾನದಿಂದ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಈ ಹಿಂದೆ ಕನ್ನಡಕ್ಕೆ 121 ಅಂಕ, ಇಂಗ್ಲೀಷಗೆ 100 ಅಂಕ, ಹಿಂದಿ 98 ಅಂಕ, ಸಮಾಜಕ್ಕೆ 96 ಅಂಕ, ವಿಜ್ಞಾನಕ್ಕೆ 81 ಅಂಕ, ಗಣಿತಕ್ಕೆ 92 ಅಂಕ ಪಡೆದುಕೊಂಡಿದ್ದಳು, ಮರು ಮೌಲ್ಯಮಾಪನದಿಂದ ಕನ್ನಡಕ್ಕೆ 123 ಅಂಕ, ವಿಜ್ಞಾನಕ್ಕೆ 87 ಅಂಕ, ಗಣಿತಕ್ಕೆ 93 ಅಂಕ ಹೀಗೆ ಮೊದಲು 588 ಕ್ಕೆ ಶೇ.94.08 ಪಡೆದುಕೊಂಡವಳು ಈಗ 601 ಅಂಕದೊಂದಿಗೆ ಶೇ.96.16 ಅಂಕದೊಂದಿಗೆ 13 ಅಂಕ ಗಳಿಕೆ ಪಡೆದುಕೊಳ್ಳುವದರೊಂದಿಗೆ ಈ ಮೊದಲು ಶಾಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದ ವಿಧ್ಯಾರ್ಥಿನಿ ಕುಮಾರಿ ಶ್ರೇಯಾ ಗಬ್ಬೂರ ಸದ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆಂದು ಶಾಲಾ ಮುಖ್ಯೋಪಾಧ್ಯಾಯ ಸುಭಾಸ ಬಿರಾದಾರ ಅವರು ತಿಳಿಸಿದ್ದಾರೆ.

ವಿಧ್ಯಾರ್ಥಿನಿಯ ಸಾಧನೆಗೆ ಶಾಲೆಯ ಗೌರವಾಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ, ಅಧ್ಯಕ್ಷ ರಾಮನಗೌಡ ಬಾಗೇವಾಡಿ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.