ಮರು ಮದುವೆಗೆ ನಿರಾಕರಣೆ ವಿಧವೆ ಮೂಗು, ಕತ್ತರಿಸಿದ ದುಷ್ಕರ್ಮಿ

ಜೈಸಲ್ಮೇರ್, ನ.೧೯- ಸೋದರ ಸಂಬಂಧಿಯನ್ನು ಮರುಮದುವೆಯಾಗಲು ನಿರಾಕರಿಸಿದ ೨೮ ವರ್ಷದ ವಿಧವೆಯ ಮೂಗು ನಾಲಿಗೆ ಕತ್ತರಿಸಿದ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆದಿದೆ.
ಘಟನೆ ಸಂಬಂಧ ಸಂಕ್ರಾ ಪೋಲೀಸರು ಮೂರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮೂಗು ಮತ್ತು ನಾಲಿಗೆಯನ್ನು ಕತ್ತರಿಸಿದ ಮಹಿಳೆಯನ್ನು ಜೈಸಲ್ಮೇರ್ ಜಿಲ್ಲೆಯ ಸಂಕ್ರಾ ಬ್ಲಾಕ್ ನ ಜೋಗಿರಾನ್ ಕಿ ದನಿ ಗ್ರಾಮದ ೨೮ ವರ್ಷದ ಮಹಿಳೆ ಗುಡ್ಡಿ ಎಂದು ಗುರುತಿಸಲಾಗಿದೆ.
ಮರು ಮದುವೆಯಾಗಲು ನಿರಾಕರಿಸುತ್ತಿದ್ದಂತೆ ಕುಟುಂಬದ ಸದಸ್ಯರು ಮಹಿಳೆಯ ಮೂಗು ಮತ್ತು ನಾಲಿಗೆಯನ್ನು ಕತ್ತರಿಸಿದ್ದಾರೆ. ತೀವ್ರ ಗಾಯಗಳಿಂದ ಬಳಲುತ್ತಿದ್ದ ಮಹಿಳೆಯನ್ನು ಜೋಧ್ ಪುರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸಂಕ್ರಾ ಪೋಲೀಸ್ ಠಾಣಾಧಿಕಾರಿ ಕಾಂತಾ ಸಿಂಗ್ ಹೇಳಿದ್ದಾರೆ.
ಕಳೆದ ಆರು ವರ್ಷಗಳ ಹಿಂದೆ ಕೋಜೆ ಖಾನ್ ಎಂಬ ವ್ಯಕ್ತಿಯೊಂದಿಗೆ ಗುಡ್ಡಿ ಅವರ ವಿವಾಹವಾಗಿತ್ತು. ಪತಿ ಸತ್ತ ನಂತರ ಗುಡ್ಡಿಯ ಮರುಮದುವೆಗೆ ಆಕೆಯ ನಾದಿನಿ ಒತ್ತಾಯಿಸುತ್ತಿದ್ದರು ಇದಕ್ಕೆ ನಿರಾಕರಿಸಿದ್ದರಿಂದ ಆಕೆಯ ಮೂಗು ಮತ್ತು ನಾಲಿಗೆಯನ್ನು ಕತ್ತರಿಸಲಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಸಹೋದರ ಬಸಿರ್ ಖಾನ್ ಪ್ರತಿಕ್ರಿಯಿಸಿ, ಸಹೋದರಿಯ ಪತಿಯ ಕುಟುಂಬದ ಸದಸ್ಯರು ಮನೆಗೆ ಬಂದು ಗಲಾಟೆ ಮಾಡಿ ಗುಡಿಯ ಮೂಗು ಮತ್ತು ನಾಲಗೆಯನ್ನು ಕತ್ತರಿಸಿ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ಸಂಬಂಧ ಜಾನು ಖಾನ್, ಅನ್ವರ್ ಖಾನ್ ಮತ್ತು ನವಾಬ್ ಖಾನ್ ಅವರನ್ನು ಜೋಧಪುರದಲ್ಲಿ ಬಂಧಿಸಲಾಗಿದೆ. ಇನ್ನೂ ೯ ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ