ಮರು ಮತ ಎಣಿಕೆ ಕೋರಿ ಟ್ರಂಪ್ ಬೆಂಬಲಿಗರಿಂದ ಕೋರ್ಟಿಗೆ ಮೊರೆ

ವಾಷಿಂಗ್ಟನ್‌, ನ 21- ಅಮೆರಿಕ ಅಧ್ಕಕ್ಷೀಯ ಚುನಾವಣೆ ಕುರಿತಂತೆ‌‌ ತಕರಾರು ಮುಗಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಪ್ರಚಾರ ತಂಡ ಜಾರ್ಜಿಯಾದಲ್ಲಿ ಮರು ಮತ ಎಣಿಕೆ ಕೋರಿ ಕೋರ್ಟ್ ಮೆಟ್ಟಿಲೇರಿದೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಜಾರ್ಜಿಯಾದಲ್ಲಿ 1200 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಆದರೆ ಈಗ ಮರು ಮತ ಎಣಿಕೆ ಕೋರಿ ನ್ಯಾಯಾಲಕ್ಜೆ ಟ್ರಂಪ್ ಬೆಂಬಲಿಗರು ಮನವಿ ಸಲ್ಲಿಸಿದ್ದಾರೆ.
1992 ಬಳಿಕ ಇದೇ ಮೊದಲ ಬಾರಿಗೆ ದ ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದೆ.
ಜಾರ್ಜಿಯಾದ ಪ್ರತಿಯೊಂದು ಮತಗಳ ಸಮರ್ಪಕ ರೀತಿಯಲ್ಲಿ ಎಣಿಕೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜಾರ್ಜಿಯಾದಲ್ಲಿ ನ್ಯಾಯಬದ್ದವಾಗಿ ಮತಗಳ ಮರು ಎಣಿಕೆ ಮಾಡುವಂತೆ ನಾವು ಮನವಿ ಮಾಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಸಹಿ ಹೊಂದಾಣಿಕೆ ಮತ್ತು ಇತರೆ ಸುರಕ್ಷಿತ ಕ್ರಮಗಳನ್ನು ಪಾಲಿಸಬೇಕು ಎಂದು ಟ್ರಂಪ್‌ ಪ್ರಚಾರ ತಂಡ ಹೇಳಿಕೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.