ಮರು ಬಿತ್ತನೆಯಿಂದ ರೈತರು ಕಂಗಾಲು

ಭಾಲ್ಕಿ :ಜು.11:ತಾಲೂಕಿನ ಹಲ್ಸಿ ಗ್ರಾಮದಲ್ಲಿ ಮರುಬಿತ್ತನೆ ಯಿಂದ ರೈತರು ದುಬಾರಿ ಖರ್ಚು ಮಾಡಿ ಬಿತ್ತನೆ ಮಾಡುತ್ತಿದ್ದಾರೆ.ಉತ್ತಮ ತಳಿ ಬೀಜದ ಕೊರತೆ, ಮತ್ತು ಬಿತ್ತನೆಯಾದ ನಂತರ ಮಳೆ ಹೆಚ್ಚಾಗಿ ಭೂಮಿಗೆ ಬಿದ್ದ ಬೀಜ ಮೊಳಕೆ ಒಡೆಯದೆ ಪುನಃ ರೈತರು ಮರುಬಿತ್ತನೆ ಮಾಡಿ ಖರ್ಚು ವೆಚ್ಚ ಮಾಡಿ ರೈತರ ಕೈ ಖಾಲಿ ಆಗಿ ಕಂಗಾಲು ಆಗಿದಾರೆ. ಮಳೆಯಿಂದ ಗ್ರಾಮದಲ್ಲಿ ಅನೇಕ ಜನರ ಮನೆ ಗೋಡೆಗಳು ಬಿದ್ದು ಹೋಗಿದ್ದು ಗ್ರಾಮ ಲೆಕ್ಕಧಿಕಾರಿಗಳಿಗೆ ತಿಳಿಸಿದರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುತಿಲ್ಲ. ಅಧಿಕಾರಿಗಳ ನಿರ್ಲಕ್ಷ, ಮೇಲಾಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಗ್ರಾಮಪಂಚಾಯತಿ ಸದಸ್ಯ ಸಂತೋಷ ಪಾಟೀಲ ತಿಳಿಸಿದಾರೆ.