ಮರುಳ ಸಿದ್ದೇಶ್ವರ ಶಿಖರ ತೈಲಾಭಿಷೇಕ

ಕೊಟ್ಟೂರು ಮೇ 19 : ತಾಲೂಕಿನ ಶ್ರೀಮದ್ ಉಜ್ಜಯಿನಿ ಪೀಠದಲ್ಲಿ ಇಂದು ಶ್ರೀಮರುಳ ಸಿದ್ದೇಶ್ವರ ಸ್ವಾಮಿ ಶಿಖರ ತೈಲಾಭಿಷೇಕವನ್ನು ಅತ್ಯಂತ ಸರಳ ಸಾಕೇಂತಿಕವಾಗಿ ಆಚರಿಸಲಾಯಿತು.
ಕರೋನಾ ಹಾವಳಿಯ ಹಿನ್ನಲೆಯಲ್ಲಿ ಈಗಾಗಲೇ ನಡೆಯಬೇಕಾಗಿದ್ದ ರಥೋತ್ಸವವು ರದ್ದಾದ ಪ್ರಯುಕ್ತ 2ನೇ ದಿನವಾದ ಇಂದು ಶ್ರೀ ಸ್ವಾಮಿ ತೈಲಾಭಿಷೇಕವನ್ನು ಸರಳ ಸಾಕೇಂತಿಕವಾಗಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ನೇರವೇರಿಸಲಾಯಿತು.
ಪಂಚಪೀಠಗಳೊಲ್ಲಾದ ಶ್ರೀಮದ್ ಉಜ್ಜಯಿನಿ ಪೀಠದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವವಾದ 2ನೇ ದಿನದಂದು ಶಿಖರಕ್ಕೆ ತೈಲಾಭಿಷೇಕ ಮಾಡುವುದು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಧಾರ್ಮಿಕ ಪದ್ಧತಿಯಾಗಿದೆ. ಶಿಖರಕ್ಕೆ ಜರ್ಮಲಿ ಎಂಬಹಳ್ಳಿಯಿದ ಎಣ್ಣೆಯನ್ನು ತಂದು ಅರ್ಪಿಸಲಾಗುವುದು ಅದೇ ರೀತಿ ಈ ವರ್ಷ ಕರೋನಾದ ಹಾವಳಿ ಹಿನ್ನಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಸರಳ ಸಾಕೆಂತಿಕವಾದ ಆಚರಣೆಯನ್ನು ಉಜ್ಜಯಿನಿ ಕ್ಷೇತ್ರದಲ್ಲಿ ಮಾಡಲಾಯಿತು.