ಮರೀಚೆ ತೆರೆಗೆ ಬರಲು ಸಜ್ಜು

ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಜಯ್ ರಾಘವೇಂದ್ರ ಸದ್ಯ ‘ಮರೀಚಿ’ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಡಿಸೆಂಬರ್ 8 ರಂದು ತೆರೆಗೆ ಬರಲಿದೆ.

ನಿರ್ದೇಶಕ ಕಮ್ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಪೊಲೀಸ್ ಅಧಿಕಾರಿಯ ಜೀವನ ಕ್ರಮ ಆಧರಿಸಿ ಚಿತ್ರ ಮಾಡಲಾಗಿದೆ. ಚಿತ್ರತಂಡ ಆರಂಭದಿಂದ ಇಲ್ಲಿವರೆಗೂ ಬೆಂಬಲವಾಗಿ ನಿಂತಿದ್ದಾರೆ. ಹೊಸ ನಿರ್ದೇಶಕನಿಗೆ ಎಲ್ಲರೂ ಬೆಂಬಲ ನೀಡಿದೆ. ಹುಟ್ಟುತ್ತಲೇ ಯಾರು ಅಪರಾಧ ಮಾಡಬೇಕು ಅಂದುಕೊಂಡಿರೋಲ್ಲ. ಆದರೆ ಪರಿಸ್ಥಿತಿ ಮನುಷ್ಯನನ್ನು ಬದಲಾಯಿಸುತ್ತವೆ ಹೇಗೆ ಏನು ಎನ್ನುವುದನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗುತ್ತಿದೆ ಎಂದರು.

ನಟ ವಿಜಯ್ ರಾಘವೇಂದ್ರ ಮಾತನಾಡಿ, ಚಿತ್ರ ತಾಂತ್ರಿಕವಾಗಿ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದರು. ವಿಜಯ ರಾಘವೇಂದ್ರ, ಸೋನು ಗೌಡ ಜತೆಗೆ ಅಭಿದಾಸ್, ಸ್ಪಂದನಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತವಿದೆ