ಮರಿ ಬನ್ನಿ ಮಹೋತ್ಸವ


ಹೊನ್ನಾಳಿ.ನ.೬; ತಾಲೂಕಿನ ಮುಜರಾಯಿ ಇಲಾಖೆಗೆ ಸೇರಿದ ಪ್ರಸಿದ್ಧ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮರಿ ಬನ್ನಿ ಮಹೋತ್ಸವ ನಡೆಯಲಿದೆ.
ಮಹಾನವಮಿ ಹಬ್ಬ ಆದ ನಂತರದ ಮೊದಲನೇ ಶುಕ್ರವಾರ ಅ.೩೦ರಂದು ದೊಡ್ಡ ಬನ್ನಿ ಮಹೋತ್ಸವ ನಡೆದಿತ್ತು. ಇದೀಗ, ಎರಡನೇ ಶುಕ್ರವಾರ ಮರಿ ಬನ್ನಿ ಮಹೋತ್ಸವ ನಡೆಯಲಿದೆ. ನಾಡಿನಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಶ್ರೀ ಹಳದಮ್ಮ ದೇವಿ ಮರಿ ಬನ್ನಿ ಮಹೋತ್ಸವದಲ್ಲಿ ಸರಕಾರದ ನಿಯಮದಂತೆ ೧೦೦ ಜನರು ಮಾತ್ರ ಭಾಗವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬಾರದು ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಮತ್ತು ಮಾರಿಕೊಪ್ಪ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.