ಮರಿಸ್ವಾಮಿ ಮಠದಲ್ಲಿ ಜಂಗಮ ವಟುಗಳಿಗೆ ಶಿವ ದೀಕ್ಷೆ

ಬಳ್ಳಾರಿ:ಮಾ.26- ನಗರದ ಮರೀಸ್ವಾಮಿ ಮಠದಲ್ಲಿ ಇಂದು ಬೆಳಿಗ್ಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ 80 ಜಂಗಮ ವಟುಗಳಿಗೆ ಶಿವ ದೀಕ್ಷಾ (ಅಯ್ಯಚಾರ) ಕಾರ್ಯಕ್ರಮ ಜರುಗಿತು.
ನಗರ ಮತ್ತು ಜಿಲ್ಲೆಯ ವಿವಿಧಡೆಯಿಂದ ಬಂದಿದ್ದ ಮಕ್ಕಳ ತಲೆಕೂದಲು ಸಂಪೂರ್ಣ ತೆಗೆಸಿ, ಕಾವಿ ಧರಿಸಿ ಶಿವಧೀಕ್ಷೆಯನ್ನು ಭೋದಿಸಲಾಯಿತು.
ಸಂಜೆ ಮೆರವಣಿಗೆ:
ಸಂಜೆ 4 ನಗರದ ಕಮ್ಮಭವನದಿಂದ ಗಂಟೆಗೆ ಮರಿಸ್ವಾಮಿ ಮಠದವರೆಗೆ ಜಗದ್ಗುರು ರೇಣುಕಾಚಾರ್ಯ ಮೂರ್ತಿಯನ್ನು ಹಾಗೂ ಹಾನಗಲ್ ಕುಮಾರ ಯತಿಗಳ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆ ನಡೆಸಲಿದೆ.